

ನಾಪೋಕ್ಲು: ಸಂಘದ ಏಳಿಗೆಗೆ ಸರ್ವ ಸದಸ್ಯರ ಸಹಕಾರ ಅಗತ್ಯ ಎಂದು ನಾಪೋಕ್ಲು ನಾಡ್ ಕೊಡವ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅಪ್ಪಾರಂಡ ಎಸ್. ಸುಧೀರ್ ಅಯ್ಯಪ್ಪ ಹೇಳಿದರು.
ಇಲ್ಲಿನ ಕೊಡವ ಸಮಾಜದ ಹರದಾಸ ಅಪ್ಪನೆರಮಂಡ ಅಪ್ಪಚ ಕವಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಂಘದ ಆರನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಸಂಘದಲ್ಲಿ ಪ್ರಸ್ತುತ 751 ಸದಸ್ಯರಿದ್ದು , 3.10 ಲಕ್ಷ ರೂ. ಲಾಭ ಗಳಿಸಿದೆ. ಸಂಘವು ಅಭಿವೃದ್ಧಿಯಿಂದ ಸಾಗುತ್ತಿದ್ದು, ಸದಸ್ಯರು ಹೆಚ್ಚಿನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ.ನಾಣಯ್ಯ, ನಿರ್ದೇಶಕರಾದ ಬಿದಾಟಂಡ ರಮೇಶ್ ಚಂಗಪ್ಪ, ಬೊಳ್ಳಿಯಂಡ ಪಿ. ಹರೀಶ್ ಕಾರ್ಯಪ್ಪ, ಕನ್ನಂಬೀರ ಸಿ.ತಿಮ್ಮಯ್ಯ, ಕುಂಡ್ಯೋಳಂಡ.ಸಿ.ಪೂವಯ್ಯ, ಕಾಟುಮಣಿಯಂಡ ಎಂ.ಉಮೇಶ್, ಅರೆಯಡ ಎಂ. ಅಶೋಕ್, ಚೋಕಿರ ಎಸ್.ಚಿನ್ನಪ್ಪ , ಚೇನಂಡ ಈ.ಗಿರೀಶ್ ಪೂಣಚ್ಚ, ಕುಲ್ಲೇಟಿರ ಎಂ.ದೇವಯ್ಯ, ಪಾಡೆಯಂಡ ಸಿ.ಕುಶಾಲಪ್ಪ , ಮೂವರ ರೇಖಾ ಪ್ರಕಾಶ್, ಕೋಟೆರ ನೈಲಾ ಚಂಗಪ್ಪ, ಸಿಇಒ ಎಸ್.ಪಿ.ದೇವಯ್ಯ ಇತರರಿದ್ದರು.