3.07 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ

crime
Published on

ಹುಬ್ಬಳ್ಳಿ: ಸಂಬಂಧಿಕರೊಂದಿಗೆ ಮಧುರೈನಿಂದ ಹುಬ್ಬಳ್ಳಿಗೆ ದಾದರ್ ರೈಲಿನಲ್ಲಿ ಆಗಮಿಸುತ್ತಿದ್ದ ಮಹಿಳೆಗೆ ಸೇರಿದ 3.07 ಲಕ್ಷ ರೂ. ಮೌಲ್ಯದ ಚಿನ್ನಾರಭರಣ ಕಳ್ಳತನವಾಗಿದೆ.
ಹ್ಯಾಂಡ್ ಬ್ಯಾಗ್‌ಗೆ ತಲೆಯಿಟ್ಟು ಮಲಗಿದ್ದರು. ಯಶವಂತಪುರ ರೈಲ್ವೆ ನಿಲ್ದಾಣದ ಹತ್ತಿರ ರೈಲು ಬರುತ್ತಿದ್ದಾಗ ಈ ಘಟನೆ ಬೆಳಕಿಗೆ ಬಂದಿದೆ. 8 ಗ್ರಾಂ ತೂಕದ ಸರ, ವಜ್ರದ ಪೆಂಡೆಂಟ್, 7 ಸಾವಿರ ರೂ. ನಗದು, 4 ಗ್ರಾಂ ಉಂಗುರ ಸೇರಿ ಒಟ್ಟು 3.07 ಲಕ್ಷ ರೂ. ಮೌಲ್ಯದ ವಸ್ತುಗಳು ಕಳ್ಳತನವಾಗಿದೆ. ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net