ಗಣಪತಿ ಚತುರ್ಥಿಗೆ ಬೃಹತ್ ಮಂಟಪ ಸಿದ್ಧ

mkg
Published on

ಮಲೇಬೆನ್ನೂರು: ಪಟ್ಟಣದ ನೀರಾವರಿ ಇಲಾಖೆ ಮೈದಾನದಲ್ಲಿ 2ನೇ ಬಾರಿಗೆ ಹಿಂದೂ ಮಹಾ ಗಣಪತಿಯ ಪ್ರತಿಷ್ಠಾಪನೆಗಾಗಿ ಬೃಹತ್ ಮಂಟಪದ ಸಿದ್ಧಪಡಿಸಲಾಗಿದೆ.

ವಿಭಿನ್ನ ಮಾದರಿಯಲ್ಲಿ ಮಂಟಪದ ನಿರ್ಮಿಸಲಾಗಿದ್ದು, ಸೋಮವಾರ ಗಣಪತಿ ಪ್ರತಿಷ್ಠಾಪನೆಯಾಗಲಿದೆ. 15 ದಿನಗಳ ಕಾಲ ಗಣಪತಿ ಇರಿಸಲಾಗುತ್ತಿದ್ದು, ಪ್ರತಿದಿನವೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸ್ಥಳೀಯ ಹಾಗೂ ಹೊರ ಜಿಲ್ಲೆಯ ಕಲಾವಿದರಿಗೆ ವೇದಿಕೆ ಕಲ್ಪಿಸಲಾಗುತ್ತಿದೆ.

ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್ ಮಂಟಪ ಮತ್ತು ಮಹಾದ್ವಾರಗಳನ್ನು ವೀಕ್ಷಣೆ ಮಾಡಿದರು. ಗಣೇಶ ಸಮಿತಿಯ ಪೂಜಾರ ರಾಜು, ಶ್ರೀನಿವಾಸ್, ಸಂಜು, ಶಿವು, ಪುರಸಭೆ ಸದಸ್ಯರಾದ ಬೆಣ್ಣೆಯಲ್ಲಿ ಸಿದ್ದೇಶ್, ರಾಜು, ಮುಖಂಡರಾದ ಸಿರಿಗೆರೆ ರಂಗನಾಥ್, ಜಿಗಳಿ ಹಾಲೇಶಪ್ಪ, ಜಿಗಳಿ ಹನುಮಗೌಡ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net