ಅಬ್ಬಿಗೇರಿ ಶಾಲೆಗೆ 2ನೇ ಬಾರಿ ಸಮಗ್ರ ವೀರಾಗ್ರಣಿ

abbigere
Published on

ನರೇಗಲ್ಲ: ಸಮೀಪದ ಅಬ್ಬಿಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಇತ್ತೀಚೆಗೆ ನರೇಗಲ್ಲ ಪಟ್ಟಣದಲ್ಲಿ ಜರುಗಿದ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ 20ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದುಕೊಂಡು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಕ್ರೀಡಾಕೂಟದಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸತತವಾಗಿ 2 ವರ್ಷ ಈ ಪ್ರಶಸ್ತಿ ದೊರಕಿದ್ದು ಕ್ರೀಡಾಪಟುಗಳಿಗೆ ಸಂತಸ ತಂದಿದೆ.

ಗಂಡು ಮಕ್ಕಳ ವಿಭಾಗದ ಗುಂಪುಗಳಲ್ಲಿ ಖೋಖೋ, ರಿಲೇಯಲ್ಲಿ ಪ್ರಥಮ ಸ್ಥಾನ, ಥ್ರೋಬಾಲ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ವೈಯಕ್ತಿಕ ಆಟಗಳಾದ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಸಂತೋಷ ಅಸುಂಡಿ ಪ್ರಥಮ, ಉದ್ದ ಜಿಗಿತದಲ್ಲಿ ಮಾಂತೇಶ ಮಾಳವಾಡ ಪ್ರಥಮ ಸ್ಥಾನ ಪಡೆದಿದ್ದಾರೆ.
ಹೆಣ್ಣು ಮಕ್ಕಳ ವಿಭಾಗದಲ್ಲಿ ಗುಂಪು ಆಟಗಳಾದ ಥ್ರೋಬಾಲ್, ಖೋಖೋ, ರಿಲೇ ಆಟಗಳಲ್ಲಿ ಪ್ರಥಮ ಸ್ಥಾನ ಪಡೆದು, ವಾಲಿಬಾಲ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ವೈಯಕ್ತಿಕ ವಿಭಾಗದಲ್ಲಿ ವಿಜಯಲಕ್ಷ್ಮೀ ಹಳ್ಳಿ 100 ಮೀ, 200ಮೀ, 100 ಮೀ ಹರ್ಡಲ್ಸ್, ಮೂರೂ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಸುಶ್ಮಿತಾ ಬನ್ನಿಗೋಳ 1500ಮೀ, 3000 ಮೀ ಓಟದ ಎರಡು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಸಂಜನಾ ತಳಗೇರಿ 800 ಮೀ ಓಟದ ಸ್ಪರ್ಧೆಯಲ್ಲಿ ಪ್ರಥಮ, ಎತ್ತರ ಜಿಗಿತದಲ್ಲಿ ಉಮಾ ಮೂಲಿಮನಿ ಮೊದಲ ಸ್ಥಾನ ಪಡೆದಿದ್ದಾರೆ.

ಮಕ್ಕಳ ಸಾಧನೆಗೆ ದೈಹಿಕ ಶಿಕ್ಷಣ ಶಿಕ್ಷಕಿ ಎಸ್. ಆರ್. ಬಂಡ್ರಿ, ಮುಖ್ಯೋಪಾಧ್ಯಾಯ ರಾಮು ಚವ್ಹಾಣ, ಎಸ್‌ಡಿಎಂಸಿ ಅಧ್ಯಕ್ಷ ವೆಂಕಟಸಿಂಗ್ ಹಜಾರೆ ಇತರರು ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net