ಐಎಂಎ ಧಾರವಾಡ ವೈದ್ಯೆಯರ ಘಟಕಕ್ಕೆ 2ನೇ ಬಹುಮಾನ

h23-ima dwd
Published on

ಹುಬ್ಬಳ್ಳಿ: ಭಾರತೀಯ ವೈದ್ಯಕೀಯ ಸಂಘ ರಾಜ್ಯ ಮಹಿಳಾ ವೈದ್ಯರ ಘಟಕವು ಹಾಸನದಲ್ಲಿ ಭಾನುವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಸಮಾವೇಶದಲ್ಲಿ (ಸೃಷ್ಟಿ) ಐಎಂಎ ಧಾರವಾಡ ಮಹಿಳಾ ವೈದ್ಯರ ಘಟಕಕ್ಕೆ 2023-24ನೇ ಸಾಲಿನ ಬೆಸ್ಟ್ ಡಬ್ಲುೃಡಿಡಬ್ಲುೃ ಸೊಸೈಟಿ ಆಫ್ ದಿ ಇಯರ್‌ನಲ್ಲಿ ಎರಡನೇ ಬಹುಮಾನ ಲಭಿಸಿದೆ.
‘ಚೇರ್ಮನ್ ಅಪ್ರಿಸಿಯೇಷನ್ ಅವಾರ್ಡ್’ ಜನವರಿಯಲ್ಲಿ ಆಯೋಜಿಸಿದ್ದ ‘ನೈಟ್ ವಾಕಥಾನ್’ ಮುಡಿಗೇರಿದೆ. ಐಎಂಎ ಧಾರವಾಡ ಮಹಿಳಾ ವೈದ್ಯರ ಘಟಕದ ಅಧ್ಯಕ್ಷೆ ಡಾ. ಕವಿತಾ ಮಂಕಣಿ, ಕಾರ್ಯದರ್ಶಿ ಡಾ. ಪಲ್ಲವಿ ದೇಶಪಾಂಡೆ, ಡಾ. ರೂಪಾ ಜೋಶಿ, ಡಾ. ವಾಣಿ ಇರಕಲ್, ಡಾ. ಸಿದ್ದಗಂಗಾ ಅವರು ಈ ಪ್ರಶಸ್ತಿಗಳನ್ನು ಸ್ವೀಕರಿಸಿದರು. ಐಎಂಎ ರಾಜ್ಯಾಧ್ಯಕ್ಷ ಡಾ. ಶ್ರೀನಿವಾಸ ಎಸ್., ಕಾರ್ಯದರ್ಶಿ ಡಾ.ಬಿ.ಪಿ. ಕರುಣಾಕರ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ. ಸೌಮ್ಯಮಣಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net