

ಬಿಸಿಲ ನಗರಿ ಕಲಬುರಗಿಯಲ್ಲಿ ಆರಂಭವಾಗಿರುವ 85ನೇ ಸಾಹಿತ್ಯ ಸಮ್ಮೇಳನವು ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ನುಡಿ ಜಾತ್ರೆಯಲ್ಲಿ ಏನೆಲ್ಲಾ ಕಾರ್ಯಕ್ರಮಗಳು ನಡೆಯಲಿದೆ ಎಂಬ ವೇಳಾಪಟ್ಟಿ ಇಲ್ಲಿದೆ.
# ಬೆಳಗ್ಗೆ 9.45ರಿಂದ 11.30ರವರೆಗೆ ಗೋಷ್ಠಿ- 3 (ಸ್ತ್ರೀ ಲೋಕ: ತಲ್ಲಣಗಳು)
# ಬೆಳಗ್ಗೆ 11.30ರಿಂದ 12.15ರವರೆಗೆ ಸಂಶೋಧಕ ಡಾ.ಷ.ಶೆಟ್ಟರ್ರಿಂದ ವಿಶೇಷ ಉಪನ್ಯಾಸ
# ಮಧ್ಯಾಹ್ನ 12.15ರಿಂದ 2ರವರೆಗೆ ಗೋಷ್ಠಿ-4 (ದಲಿತ ಬಂಡಾಯ; ಸ್ಥಿತ್ಯಂತರದ ನೆಲೆಗಳು)
# ಮಧ್ಯಾಹ್ನ 2.30ರಿಂದ 4ರವರೆಗೆ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಸಮಾರಂಭ
# ಸಂಜೆ 4ರಿಂದ 5.30ರವರೆಗೆ ಗೋಷ್ಠಿ- 5 (ವಚನ-ಕೀರ್ತನ ಸಾಹಿತ್ಯ)
# ಸಂಜೆ 5.30ರಿಂದ 7ರವರೆಗೆ ಗೋಷ್ಠಿ-6 (ಕನ್ನಡ ಮಾಧ್ಯಮ ಮತ್ತು ಶಿಕ್ಷಣ)
# ಸಂಜೆ 6.30ರಿಂದ ರಾತ್ರಿ 11ರವರೆಗೆ ಗುಲ್ಬರ್ಗ ವಿವಿಯ ಶ್ರೀ ವಿಜಯ ಪ್ರಧಾನ ವೇದಿಕೆ, ಡಾ.ಅಂಬೇಡ್ಕರ್ ಸಭಾಂಗಣ, ಮಹಾತ್ಮಗಾಂಧಿ ಸಭಾಂಗಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ
ಪ್ರಚಾರಕ್ಕೂ ವೇದಿಕೆ!
ಕಲಬುರಗಿಯಲ್ಲಿ ನಡೆದಿರುವ ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಪ್ರಚಾರದ ವೇದಿಕೆಯಾಗಿಯೂ ಕಾಣಿಸಿದೆ. ಸಮ್ಮೇಳನದ ಮೊದಲ ದಿನ ಸ್ಪರ್ಧಾಕಾಂಕ್ಷಿಗಳು ತಮ್ಮ ಪರ ಬಿರುಸಿನ ಪ್ರಚಾರ ಮಾಡಿಕೊಂಡರು. ಹಾಲಿ ಅಧ್ಯಕ್ಷ ಮನು ಬಳಿಗಾರ ಅವಧಿ ಇನ್ನೇನು ಕೊನೇ ಹಂತಕ್ಕೆ ಬಂದಿದ್ದು, ಇಷ್ಟರಲ್ಲೇ ಚುನಾವಣೆ ನಡೆಯುವುದಿದೆ. ಹೀಗಾಗಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟವರು ಪ್ರಚಾರದಲ್ಲಿ ತೊಡಗಿಕೊಂಡರು. ಉದ್ಘಾಟನಾ ಸಮಾರಂಭ ನಡೆದ ಸಭಾಂಗಣದಲ್ಲೇ ಕರಪತ್ರಗಳನ್ನು ಹಂಚುವ ಮೂಲಕ ಮತದಾರರನ್ನು ತಲುಪಲು ಪ್ರಯತ್ನಿಸಿದರು. ಜತೆಗೆ ಜಿಲ್ಲೆ ಹಾಗೂ ತಾಲೂಕು ಕಸಾಪ ಘಟಕಗಳನ್ನು ಭೇಟಿ ಮಾಡಿ ಮನವೊಲಿಸಲು ಪ್ರಯತ್ನಿಸಿದರು. ಈ ಪ್ರಯತ್ನದಲ್ಲಿ ಸಿ.ಕೆ.ರಾಮೇಗೌಡ, ಮಹೇಶ್ ಜೋಷಿ ಮುಂಚೂಣಿಯಲ್ಲಿ ಕಾಣಿಸಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗಿನ ತಮ್ಮ ಒಡನಾಟ, ಕನ್ನಡಪರ ಹೋರಾಟಗಳು, ಸಮಾಜ ಸೇವೆ ಇತರ ಮಾಹಿತಿಯನ್ನು ಮತದಾರರಿಗೆ ತಲುಪಿಸಲು ಬೆವರು ಹರಿಸಿದರು.