೨ನೇ ದಿನ ಸತ್ಸಂಗ ಸಂಜೀವಿನಿ ಕೂಟ

೨ನೇ ದಿನ ಸತ್ಸಂಗ ಸಂಜೀವಿನಿ ಕೂಟ
೨ನೇ ದಿನ ಸತ್ಸಂಗ ಸಂಜೀವಿನಿ ಕೂಟ
Published on

ರಾಯಚೂರು ಭೌತಿಕವಾಗಿ ಭಿನ್ನ ಕಾಯಕದವರ ಒಗ್ಗೂಡಿಸಿದ್ದು ಬಸವಣ್ಣನವರಾದರೆ, ಎಲ್ಲ ಶರಣರ ಶೋಧನೆ ಮಾಡಿ ಅವರೊಳಗೆ ಅಂತರAಗದ ಅರಿವು ಮೂಡಿಸಿದ್ದು ಅಲ್ಲಮ ಪ್ರಭು ಎಂದು ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಮಲ್ಲೆಪುರಂ ಜಿ.ವೆಂಕಟೇಶ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಮಾತೋಶ್ರೀ ತಪೋವನದ ಬಸವ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಮಾತೋಶ್ರೀ ನೀಲಮ್ಮ ತಾಯಿಯವರ ೨೩ನೇ ಪುಣ್ಯಸ್ಮರಣೆ ಹಾಗೂ ಡಬ್ಬೇರು ಮಡವು ಪರಮಪೂಜ್ಯ ಸದ್ಗುರು ವಿದ್ಯಾನಂದ ಶರಣರ ಸ್ಮರಣೆ ನಿಮಿತ್ತ ಹಮ್ಮಿಕೊಂಡಿರುವ ೨ನೇ ದಿನ ಸತ್ಸಂಗ ಸಂಜೀವಿನಿ ಕೂಟದಲ್ಲಿ ವಿಶೇಷ ಉಪನ್ಯಾಸ ನೀಡಿದರು.೧೨ನೇ ಶತಮಾನದಲ್ಲಿ ಶರಣ ತತ್ವ ಪ್ರತಿಪಾದಿಸಿದ ಪ್ರಮುಖರದಲ್ಲಿ ಬಸವಣ್ಣ, ಅಲ್ಲಮಪ್ರಭುಗಳು ವಿಭಿನ್ನ ಕಾಯಕಗಳಿಂದ ಬಂದವರನ್ನು ಒಗ್ಗೂಡಿಸಿ ಕೂಡಿಸಿದ್ದು ಅಲ್ಲಮರು ವಚನ ಸಾಹಿತ್ಯ ಪಥ ನಿರ್ಮಿಸಿದರು. ಅಲ್ಲಮರಿಲ್ಲದಿದ್ದರೆ ವಚನ ಸಾಹಿತ್ಯ ಉಹಿಸಿಕೊಳ್ಳಲಾಗುತ್ತಿರಲಿಲ್ಲ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಲೇಖಕ ಬಸವರಾಜ ಸ್ವಾಮಿ ಮಾತನಾಡಿ, ಎಲ್ಲರೊಳಗಿರುವ ಪರಮಾತ್ಮ ನನ್ನ ಅರಿಯುವವರೆಗೂ ನೀನು ಕನ್ಯೆಯೇ ಎಂದ ಭಾವಿಸಿದ್ದಾನೆ. ಎಲ್ಲೂ ಹೋಗದ ಮನಸ್ಸು ಒಳಗೆ ಸತ್ತರೆ ಸತ್ಯ ಅರಿವಿಗೆ ಬರುತ್ತದೆ. ತನುವಿಂದ ರಚಿತ ಗ್ರಂಥಗಳಿAದ ಅರಿವು ಬರುವುದಿಲ್ಲ ಅದು ಪಂಡಿತರು, e್ಞÁನವಂತರು ಬರೆದಿದ್ದು ಈ ಮನುಷ್ಯ ಬರೆದ ಗ್ರಂಥದಿAದ ಬಂದ e್ಞÁನ ಅರಿವು ಮೂಡಿಸದು ತನ್ನೊಳಗಿನ ಅರಿವು ಅರಿಯದೆ ಬರೆದ ಗ್ರಂಥ ಹೊತ್ತು ತಿರುಗಿದ ಎಂದು ಕಳವಳ ಪಟ್ಟರು.

ತನ್ನ ತಾನು ಅರಿಯಲೋಸ್ಕರವೇ ೧ ಲಕ್ಷ ೯೬ ಸಾವಿರ ಜನ ಕಲ್ಯಾಣಕ್ಕೆ ಬಂದರು ಅದರಲ್ಲಿ ಅರಿತ ೭೭೦ ಜನ ಮಾತ್ರ ಬುದ್ದಿವಂತರಾಗಿ ತಮ್ಮನ್ನು ತಾವು ಅರಿವು ಬಸವಣ್ಣö, ಅಲ್ಲಮನಂತಾದರು ಕೃಷ್ಣನಿಂದೆ ಅರ್ಜುನನೇ ಬರಲಿಲ್ಲö, ಬುದ್ದö, ಮಹಾವೀರರ ತತ್ವ ಅರಿತವರೆಷ್ಟು ಎಲ್ಲರೂ ಯಾಕೆ ಅಂತಹ ದಾರ್ಶನಿಕರು, ಶರಣ, ಸಂತರಾಗಲಿಲ್ಲ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದರು.

ಈ ಸಂದರ್ಭದಲ್ಲಿ ಬೆನಕನಳ್ಳಿಯ ಶರಣ ಶ್ರೀ ದೇವಾನಂದ, ಡಾ.ಬಿ.ಎಂ.ಶರಭೇAದ್ರಸ್ವಾಮಿ, ಪಂ.ಡಾ.ನರಸಿAಹಲು ವಡವಾಟಿ, ಹನುಮಂತರಾಯ ಕಾಕರಗಲ್ ಸೇರಿ ಅನೇಕರು ಇದ್ದರು.

-----------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net