

ಧಾರವಾಡ: ಪಾಕಿಸ್ತಾನ ವಿರುದ್ಧ 1999ರ ಜು. 26ರಂದು ಕಾರ್ಗಿಲ್ ಯುದ್ಧ ಗೆದ್ದ ಪ್ರಯುಕ್ತ ದೇಶಾದ್ಯಂತ ‘ಆಪರೇಶನ್ ವಿಜಯ್’ ಹೆಸರಿನಲ್ಲಿ ಸಂಭ್ರಮಿಸಲಾಗುತ್ತದೆ. ಭಾರತೀಯ ಸೈನ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ನಗರದ ‘ಮೈ ದೇಶ್ ಫೌಂಡೇಷನ್ನಿಂದ 2ಕೆ ರನ್ ಆಯೋಜಿಸಲಾಗಿದೆ.
ಜು. 23ರಂದು ಬೆಳಗ್ಗೆ 7.30ಕ್ಕೆ ಇಲ್ಲಿನ ಕರ್ನಾಟಕ ಕಾಲೇಜು ವೃತ್ತದಿಂದ (ಕೆಸಿಡಿ) 2ಕೆ ರನ್ ಆಯೋಜಿಸಲಾಗಿದೆ. ಕೆಯುಐಡಿಎ್ಸಿ ಕಾರ್ಯನಿರ್ವಾಹಕ ನಿರ್ದೇಶಕ ಸಿದ್ದಲಿಂಗಯ್ಯ ಹಿರೇಮಠ ಹಾಗೂ ರಣಜಿ ಮಾಜಿ ಆಟಗಾರ ಸೋಮಶೇಖರ ಶಿರಗುಪ್ಪಿ ಅವರು 2ಕೆ ರನ್‌ಗೆ ಚಾಲನೆ ನೀಡುವರು. ಕೆಸಿಡಿ ವೃತ್ತದಿಂದ ಜುಬಿಲಿ ವೃತ್ತ, ಕೋರ್ಟ್ ವೃತ್ತ, ಕೇಂದ್ರ ಗ್ರಂಥಾಲಯ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಕಾರ್ಗಿಲ್ ಸ್ತೂಪದವರೆಗೆ 2ಕೆ ರನ್ ಸಾಗಲಿದೆ.
ಈ ಕಾರ್ಯಕ್ರಮಕ್ಕೆ ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ 24*7 ಸುದ್ದಿವಾಹಿನಿಯ ಸಹಯೋಗ ಇರಲಿದೆ. ಜತೆಗೆ ಕೇಂದ್ರ ಸಚಿವ ಪ್ರಲ್ಹಾಸ ಜೋಶಿ, ಗ್ರಾಮ ವಿಕಾಸ ಸಂಸ್ಥೆ, ಸಾಯಿರಾಮ ಡೆವಲಪರ್ಸ್ ಆ್ಯಂಡ್ ಬಿಲ್ಡರ್ಸ್, ಎಚ್‌ಸಿಜಿ ಎನ್‌ಎಂಆರ್ ಕ್ಯಾನ್ಸರ್ ಸೆಂಟರ್ ಹುಬ್ಬಳ್ಳಿ, ಟ್ರು ಮಿಶ್ರಾ, ಆಶಾಕಿರಣ ೌಂಡೇಷನ್, ಭಾರತ್ ಬುಕ್ ಡಿಪೋ ಹಾಗೂ ್ಯಾಟ್ ಬಾಯ್ ಕಮಿಟಿ ಸಹಕಾರ ನೀಡಿವೆ.
ಆಸಕ್ತರು ಸ್ಥಳದಲ್ಲೇ ನೋಂದಣಿ ಮಾಡಿಕೊಳ್ಳಬಹುದು. ಮಾಹಿತಿಗೆ ಮೊ.ಸಂ.: 8073123711 ಅಥವಾ 9742511517ಗೆ ಸಂಪರ್ಕಿಸಬಹುದು.