ಬೊಮ್ಮಾಯಿ ಸರ್ಕಾರದಲ್ಲೇ ನಮಗೆ ಮೀಸಲಾತಿ ದೊರೆಯಲಿದೆ: ಜ.ವಚನಾನಂದ ‌ಸ್ವಾಮೀಜಿ

IMG_20221112_141557.jpg
Published on

ಹೊಸಪೇಟೆ: ಈ ಸರ್ಕಾರದಲ್ಲಿ ನಮ್ಮವರೇ, ಸಿಎಂ, ಸಚಿವರು ಇದ್ದಾರೆ. ಇದಣೆ ಸರ್ಕಾರದಲ್ಲಿ ಪಂಚಮಸಾಲಿ ಸಮುದಾಯಕ್ಕೆ ಹಿಂದುಳಿದ ಪ್ರವರ್ಗ ೨ಎ ಮೀಸಲಾತಿ ದೊರೆಯಲಿದೆ ಎಂದು ಪಂಚಮಸಾಲಿ ಹರಿಹರ ಪೀಠದ ಜ. ವಚನಾನಂದ ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಆಯೋಜಿಸಿರುವ ಜಿಲ್ಲಾ ಪಂಚಮಸಾಲಿ ಸಮಾವೇಶಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.
ವೀರಶೈವ ಪಂಚಮಸಾಲಿ ಜನರಿಗೆ 2A ಮೀಸಲಾತಿ ಕಲ್ಪಿಸುವ ಕುರಿತು ಕುಲಶಾಸ್ತ್ರ ಅಧ್ಯಯನ ನಡೆಯುತ್ತಿದೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ  ಜಯಪ್ರಕಾಶ್ ಹೆಗ್ಡೆ ಅವರು ವರದಿ ನೀಡಿದ ನಂತರ ಸರ್ಕಾರ ತನ್ನ ನಿರ್ಧಾರ ಕೈಗೊಳ್ಳಲಿದೆ ಎಂದರು.
ಅದರ ಭಾಗವಾಗಿ ಎಲ್ಲಾ ಜಿಲ್ಲೆಗಳಲ್ಲಿ ಜನ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ.‌
ಇದೇ ವೇಳೆ ಪಂಚಪೀಠಗಳು, ಕಾಂಗ್ರೆಸ್, ಬಿಜೆಪಿ ನಾಯಕರ ವಿರುದ್ಧ ಮಾತನಾಡಿದ ವಿಡಿಯೋ ವೈರಲ್ ಆಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಶ್ರೀಗಳು, ನಾನು ಸತ್ಯವನ್ನೇ ಹೇಳಿದ್ದೇನೆ. ನಮ್ಮ ಭಕ್ತರು ಕೇಳಿದ ಪ್ರಶ್ನೆಗೆ ನಾನು ಉತ್ತರ ಕೊಟ್ಡಿದ್ದೇನೆ. ಯಾವುದೇ ರೀತಿಯಲ್ಲಿ ಗೊಂದಲ್ಲ.‌ ನೀವು ಅದನ್ನು ಬೇರೆ ರೀತಿ ತೋರಿಸ್ತಿದ್ದೀರಿ ಎಂದರು.‌

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net