2ಎ ಪ್ರಮಾಣಪತ್ರಕ್ಕಾಗಿ ಪ್ರತಿಭಟನೆ

06Ravig6
ಶ್ರೀವಿಶ್ವಕರ್ಮ ಸೇವಾ ಸಂಘದಿಂದ ಬೆಳಗಾವಿಯಲ್ಲಿ ಪ್ರತಿಭನಾ ರ‌್ಯಾಲಿ ನಡೆಸಲಾಯಿತು. ರಮೇಶ ದೇಸೂರಕರ, ರಾಜು ಸುತಾರ, ಜ್ಯೋತಿಬಾ ಲೋಹಾರ, ಸಂದೀಪ ಮಂಡೋಳಕರ, ಬಾಳು ಸುತಾರ, ಅರುಣ ದೇಸೂರಕರ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.
Published on

ಬೆಳಗಾವಿ:2ಎ ಜಾತಿ ಪ್ರಮಾಣಪತ್ರ ನೀಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಶ್ರೀ ವಿಶ್ವಕರ್ಮ ಸೇವಾ ಸಂಘದ ನೇತೃತ್ವದಲ್ಲಿ ನಗರದ ಚನ್ನಮ್ಮ ವೃತ್ತದಿಂದ ಜಿಲ್ಲಾಕಾರಿ ಕಚೇರಿವರೆಗೆ ಬುಧವಾರ ಪ್ರತಿಭಟನಾ ರ‌್ಯಾಲಿ ನಡೆಸಲಾಯಿತು.

ಪೂರ್ವಜರೆಲ್ಲರೂ ಹಿಂದು ಮರಾಠ ಎಂದು ಜಾತಿ ಪ್ರಮಾಣ ಪತ್ರ ಹೊಂದಿದ್ದರು. ವಿಶ್ವಕರ್ಮ ಸಮುದಾಯದ ಬಹಳ ಜನರು ಜಾತಿ ದಾಖಲೆಯಲ್ಲಿ ಹಿಂದು ಮರಾಠ ಎಂದು ದಾಖಲಿಸಿಕೊಂಡಿದ್ದಾರೆ. ಹೀಗಾರಿ ಸರ್ಕಾರಿ ಸೌಲಭ್ಯ ದೊರೆಯುತ್ತಿಲ್ಲ. ಅದನ್ನು ಸರಿಪಡಿಸಿ ಹಿಂದು ಪಂಚಾಳ ವಿಶ್ವಕರ್ಮ ಹಿಂದುಳಿದ ವರ್ಗ 2ಎ ಎಂದು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ವಿಶ್ವಕರ್ಮ ಸಮುದಾಯಕ್ಕೆ ಸೇರಿದ ಲೋಹಾರ, ಸುತಾರ, ಪಂಚಾಳ, ಕಮ್ಮಾರ, ಬಡಿಗೇರ, ಪತ್ತಾರ, ಚಾರಿ ಈ ಉದ್ಯೋಗಸ್ಥರಿಗೆ ಸಾಲ ಮತ್ತು ಸರ್ಕಾರಿ ಸೌಲಭ್ಯ ಕಲ್ಪಿಸಬೇಕು. ಸ್ವಂತ ಮನೆ ನಿರ್ಮಿಸಿಕೊಳ್ಳಲು ಆಶ್ರಯ ಯೋಜನೆಯಡಿ ಮನೆಗಳನ್ನು ಮಂಜೂರು ಮಾಡಿಕೊಡಬೇಕು. ಕಾರ್ಮಿಕ ಇಲಾಖೆಯಿಂದ ಕಾರ್ಮಿಕ ಕಾರ್ಡ್ ಜತೆಗೆ ಮಕ್ಕಳಿಗೆ ಸರ್ಕಾರದಿಂದ ಸ್ಕಾಲರ್‌ಶಿಪ್ ಕೊಡಬೇಕು ಎಂದು ಎಡಿಸಿ ಡಾ. ವಿಜಯಕುಮಾರ ಹೊನಕೇರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ವಿಶ್ವಕರ್ಮ ಸಂಘದ ಅಧ್ಯಕ್ಷ ರಮೇಶ ದೇಸೂರಕರ, ರಾಜು ಸುತಾರ, ಜ್ಯೋತಿಬಾ ಲೋಹಾರ, ಸಂದೀಪ ಮಂಡೋಳಕರ, ಬಾಳು ಸುತಾರ, ಅರುಣ ದೇಸೂರಕರ ಸೇರಿ ನೂರಾರು ಜನ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net