29ರಂದು ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆ

bodybuilding_1498893908_29288
Published on

ಮೈಸೂರು: ಕರ್ನಾಟಕ ಸ್ಪೋರ್ಟ್ಸ್ ಫೌಂಡೇಷನ್ ವತಿಯಿಂದ ರಾಜ್ಯ ಮಟ್ಟದ ಪುರುಷರು ಹಾಗೂ ಮಹಿಳೆಯರ ದೇಹದಾರ್ಢ್ಯ ಸ್ಪರ್ಧೆಯನ್ನು ಜು.29ರಂದು ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಲಾಗಿದೆ.


ಮೈಸೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎ.ಸಿ.ಮಂಜುನಾಥ್, ಕರ್ನಾಟಕ ಸ್ಪೋರ್ಟ್ಸ್ ಫೌಂಡೇಷನ್ ಮುಖ್ಯಸ್ಥ ಆರಾಧ್ಯ ಅವರು ಸ್ಪರ್ಧೆಯ ಪೋಸ್ಟರ್ ಅನ್ನು ಚಾಮುಂಡಿಬೆಟ್ಟದಲ್ಲಿ ಗುರುವಾರ ಬಿಡುಗಡೆ ಮಾಡಿದರು.


ಯುವಕ-ಯುವತಿಯರು ಮಾದಕವಸ್ತುಗಳಿಗೆ ದಾಸರಾಗದೆ ತಮ್ಮ ಆರೋಗ್ಯದ ಕಡೆ ಗಮನಹರಿಸಬೇಕು. ದೇಹದಾರ್ಢ್ಯದಿಂದ ತಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು ಎಂದು ಹೇಳಿದರು.


ಆಧುನಿಕ, ಒತ್ತಡದ ಬದುಕಿನಲ್ಲಿ ಬದಲಾದ ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆರೋಗ್ಯದ ಬಗ್ಗೆ ಗಮನಹರಿಸುವಂತೆ ಅರಿವು ಮೂಡಿಸಲು ದೇಹದಾರ್ಡ್ಯ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಹೇಳಿದರು.


ವ್ಯವಸ್ಥಾಪಕ ಹರೀಶ್, ಐಶ್ವರ್ಯ ಆಸ್ಪತ್ರೆ ಮುಖ್ಯಸ್ಥ ಬೋರಲಿಂಗಯ್ಯ, ಕಾಮನಕೆರೆಹುಂಡಿ ಎಚ್.ಗಿರೀಶ್, ಉಪಾಧ್ಯಕ್ಷೆ ಲಲಿತಾ, ಕಾರ್ಯದರ್ಶಿ ನಿಶ್ಚಯ್‌ಕುಮಾರ್, ವಿಕ್ರಂ, ರವಿಕುಮಾರ್, ಅಮೀನ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net