29ರಂದು ಆರ್ಯವೈಶ್ಯ ಕಲಾ ವೈಭವ ಕಾರ್ಯಕ್ರಮ

29ರಂದು ಆರ್ಯವೈಶ್ಯ ಕಲಾ ವೈಭವ ಕಾರ್ಯಕ್ರಮ
Published on

ಹಾಸನ: ಕರ್ನಾಟಕ ರಾಜ್ಯದ ಆರ್ಯ ವೈಶ್ಯ ಜನಾಂಗದ ಸಂಘಟನೆಗಾಗಿ, ಕಲೆಯ ಅನಾವರಣಕ್ಕಾಗಿ, ಬಾಂಧವ್ಯ ವೃದ್ಧಿಗಾಗಿ ಹಾಸನ ಮತ್ತು ಕೊಡಗು ಆರ್ಯವೈಶ್ಯ ಕಲಾ ವೈಭವ ಕಾರ್ಯಕ್ರಮವನ್ನು ನಗರದ ಶುಭೋದಯ ಕಲ್ಯಾಣ ಮಂಟಪದಲ್ಲಿ ಸೆ.29ರ ಭಾನುವಾರದಂದು ಏರ್ಪಡಿಸಲಾಗಿದೆ ಎಂದು ಕರ್ನಾಟಕ ಆರ್ಯವೈಶ್ಯ ಮಹಾಸಭಾ ಜಿಲ್ಲಾಧ್ಯಕ್ಷ ಪಿ.ಜಿ. ಶ್ರೀಕಾಂತ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಹಾಸನ ಮತ್ತು ಕೊಡಗು ಜಿಲ್ಲೆಯ ಎಲ್ಲಾ ಆರ್ಯವೈಶ್ಯ ಬಂಧುಗಳು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ಆರ್ಯವೈಶ್ಯ ಮಹಾಸಭೆಯ ಅಧ್ಯಕ್ಷರಾದ ಆರ್.ಪಿ. ರವಿಶಂಕರ್, ಸಂಸತ್ ಸದಸ್ಯರಾದ ಶ್ರೇಯಸ್ ಪಟೇಲ್, ಹಾಸನದ ಶಾಸಕ ಸ್ವರೂಪ್ ಪ್ರಕಾಶ್, ಆರ್ಯವೈಶ್ಯ ಮತ್ತು ಮಹಾಸಭೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಎ.ಆರ್. ರವಿಕುಮಾರ್ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಎರಡೂ ಜಿಲ್ಲೆಗಳ ಎಲ್ಲ ಊರಿನ ಬಂಧುಗಳು ಭಾಗವಹಿಸಿ ಕಲಾಪ್ರದರ್ಶನವನ್ನು ನೀಡಲಿದ್ದಾರೆ. ಇದರಲ್ಲಿ ವೈಶ್ಯ ಲಗ್ನಂ ಅವರಿಂದ ಜಾತಕ ಹೊಂದಾಣಿಕೆ ಶಿಬಿರ, ಮಹಾಸಭೆಯು ಜನಾಂಗದ ಅಭಿವೃದ್ಧಿಗಾಗಿ ರೂಪಿಸಿರುವ ಸುಮಾರು 30ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಮಹಾಸಭಾ ಅಧ್ಯಕ್ಷರು ತಿಳಿಸಲಿದ್ದಾರೆ. ಈ ಸೌಹಾರ್ದ ಸಂಘಟನೆಯ ಕಾರ್ಯಕ್ರಮಕ್ಕೆ ಹೆಚ್ಚಿನ ರೀತಿಯಲ್ಲಿ ಸಮಾಜದ ಬಾಂಧವರು ಆಗಮಿಸಿ ಯಶಸ್ವಿ ಮಾಡಿಕೊಡಬೇಕಾಗಿ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಆರ್ಯವೈಶ್ಯ ಮಹಾಸಭಾ ರಾಜ್ಯ ಸಂಘಟನಾ ಕಾರ್ಯದರ್ಶಿ ಎ.ಆರ್. ರವಿಕುಮಾರ್, ಮೈಸೂರು ವಿಭಾಗೀಯ ಉಪಾಧ್ಯಕ್ಷ ಕೆ.ಜಿ. ಪಾರ್ಥಸಾರಥಿ, ವಿಶ್ವನಾಥ್, ಜಿಲ್ಲಾ ಕಾರ್ಯದರ್ಶಿ ಕೆ.ಆರ್. ನಾರಾಯಣ್, ಸಾಂಸ್ಕೃತಿಕ ಅಧ್ಯಕ್ಷರಾದ ವಾಣಿ ನಾಗೇಂದ್ರ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net