

ಚಡಚಣ: ಪಟ್ಟಣದ ಶ್ರೀಸಂಗಮೇಶ್ವರ ಜಾತ್ರೆ ಜ.29 ರಿಂದ ಫೆ.4 ರವರೆಗೆ ನಡೆಯಲಿದೆ. 29 ರಂದು ನಸುಕಿನ ಜಾವ ಸಂಗಮೇಶ್ವರ ದೇವರಿಗೆ ಮಹಾರುದ್ರಾಭಿಷೇಕ ಮತ್ತು ನಂದೀಶನಿಗೆ ಎಣ್ಣೆ ಮಜಲು ಪೂಜೆ ನಡೆಯುವುದು. ಬೆಳಗ್ಗೆ 7ಕ್ಕೆ ವೀರಭದ್ರೇಶ್ವರ ದೇವರ ಗುಡಿಯಿಂದ ಪಲ್ಲಕ್ಕಿ, ನಂದಿ ಧ್ವಜದ ಮೆರವಣಿಗೆ ಸಕಲ ವಾದ್ಯಮೇಳದೊಂದಿಗೆ ಸಂಗಮೇಶ್ವರ ದೇವಸ್ಥಾನಕ್ಕೆ ತಲುಪುವುದು. 9ಕ್ಕೆ ದೇವರ ನುಡಿ ಕಾರ್ಯಕ್ರಮ ಜರುಗುವುದು.
ಜ.30 ರಂದು ಬೆಳಗ್ಗೆ 7ಕ್ಕೆ ಹೋಮ, 9ಕ್ಕೆ ಭಾರ ಎತ್ತುವ ಸ್ಪರ್ಧೆ ನಡೆಯಲಿದೆ. ಮಧ್ಯಾಹ್ನ 3ಕ್ಕೆ ವೀರಭದ್ರೇಶ್ವರ ದೇವಸ್ಥಾನದಿಂದ ಪಲ್ಲಕ್ಕಿ, ನಂದಿ ಧ್ವಜದ ಮೆರವಣಿಗೆ ಸಂಗಮೇಶ್ವರ ದೇವಸ್ಥಾನಕ್ಕೆ ತಲುಪುವುದು. ರಾತ್ರಿ 9ಕ್ಕೆೆ ಸಂಗಮೇಶ್ವರ ದೇವಸ್ಥಾನದ ಪಕ್ಕದಲ್ಲಿ ಮದ್ದು ಸುಡಲಾಗುವುದು.
ಜ.31 ರಂದು ಮಧ್ಯಾಹ್ನ 2.30ಕ್ಕೆೆ ರಾಷ್ಟ್ರಮಟ್ಟದ ಕುಸ್ತಿಪಟುಗಳಿಂದ ಕುಸ್ತಿ ಸ್ಪರ್ಧೆ ನಡೆಯಲಿದೆ. ರಾತ್ರಿ 10ಕ್ಕೆ ಸಿದ್ದು ನಾಲ್ವತವಾಡರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಫೆ.1 ರಂದು ಸಂಜೆ 4ಕ್ಕೆ ಜಾನುವಾರು ಪ್ರಶಸ್ತಿ ಪ್ರದಾನ ಸಮಾರಂಭ ಜರುಗುವುದು. ಫೆ.4ರಂದು ಸಂಜೆ 7ಕ್ಕೆ ಸಂಗಮೇಶ್ವರ ದೇವಸ್ಥಾನದಿಂದ 7ನೇ ದಿವಸಕ್ಕೆ ಪಲ್ಲಕ್ಕಿ ನಂದಿ ಧ್ವಜ ವಿವಿಧ ವಾದ್ಯಗಳೊಂದಿಗೆ ವೀರಭದ್ರೇಶ್ವರ ದೇವಸ್ಥಾನಕ್ಕೆ ಆಗಮಿಸುವುದರೊಂದಿಗೆ ಜಾತ್ರೆ ಮಂಗಳಗೊಳ್ಳಲಿದೆ.
ಜಾತ್ರೆಗೆ ಬರುವ ಭಕ್ತಾದಿಗಳಿಗೆ ಸ್ಥಳೀಯ ಬಟ್ಟೆ ವ್ಯಾಪಾರಿ ವಿವೇಕಾನಂದ ಹಿಟ್ನಳ್ಳಿ ಅನ್ನ ಪ್ರಸಾದ ವ್ಯವಸ್ಥೆ ಏರ್ಪಡಿಸಿದ್ದಾರೆ. ನಾಟಕ ಹಾಗೂ ವಿವಿಧ ಮನರಂಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜ.28 ರಿಂದ ರೈತರು ತಮ್ಮ ಜಾನುವಾರುಗಳನ್ನು ಜಾತ್ರೆಗೆ ಕರೆತರಬೇಕು ಎಂದು ಸಂಗಮೇಶ್ವರ ಸಂಸ್ಥೆ ತಿಳಿಸಿದೆ.