

ಮಂಡ್ಯ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 29 ಅಭ್ಯಥಿಗಳಿಂದ 38 ನಾಮಪತ್ರ ಸಲ್ಲಿಕೆಯಾಗಿದೆ.
ಪ್ರಮುಖವಾಗಿ ಮಳವಳ್ಳಿ ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ನಾಲ್ಕು ನಾಮಪತ್ರ, ಬಿಜೆಪಿಯಿಂದ ಮುನಿರಾಜು, ಮಂಡ್ಯದಿಂದ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಯಾಗಿ ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ಎಸ್.ಸಿ.ಮಧುಚಂದನ್ ಎರಡು ನಾಮಪತ್ರ, ಮದ್ದೂರು ಕಾಂಗ್ರೆಸ್‌ನಿಂದ ಕದಲೂರು ಉದಯ್ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಮಳವಳ್ಳಿ ಕ್ಷೇತ್ರದಿಂದ ಭಾರತೀಯ ಬೆಳಕು ಪಾರ್ಟಿಯಿಂದ ಸಿ.ಎಂ.ನಾಗರಾಜಮೂರ್ತಿ, ಪಕ್ಷೇತರ ಅಭ್ಯರ್ಥಿಯಾಗಿ ಮಂಟ್ಟಲಿಂಗು ಮತ್ತು ಎಚ್.ಡಿ.ದೇವಪ್ರಸಾದ್, ಮದ್ದೂರಿನಿಂದ ಬಿಎಸ್ಪಿ ಅಭ್ಯರ್ಥಿಯಾಗಿ ಎಸ್.ಪಿ.ಶಿವಕುಮಾರ್, ಪಕ್ಷೇತರನಾಗಿ ಕೆ.ಎಸ್.ಪ್ರಜ್ವಲ್‌ಗೌಡ, ಮೇಲುಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚಿಕ್ಕಯ್ಯ, ಇ.ಎನ್.ಕೃಷ್ಣ, ಟಿ.ವಿ.ಅರುಣ್‌ಕುಮಾರ್, ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಯಾಗಿ ದರ್ಶನ್ ಪುಟ್ಟಣ್ಣಯ್ಯ, ಆಪ್‌ನಿಂದ ಎಚ್.ಆರ್.ಅಶೋಕ್, ಬಿಜೆಪಿಯಿಂದ ಡಾ.ಎನ್.ಎಸ್.ಇಂದ್ರೇಶ್, ಮಂಡ್ಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ಲೋಲ, ಎನ್.ಬಸವರಾಜು, ಡಿ.ಎಸ್.ರವಿಕುಮಾರ್, ಪಕ್ಷೇತರ ಹಾಗೂ ಜೆಡಿಎಸ್‌ನಿಂದ ಎಂ.ಜೆ.ಚಿಕ್ಕಣ್ಣ, ಶ್ರೀರಂಗಪಟ್ಟಣದಿಂದ ಬಿಜೆಪಿಯಿಂದ ಎಸ್.ಸಚ್ಚಿದಾನಂದ, ಇಂಡಿಯನ್ ಮೂಮೆಂಟ್ ಪಾರ್ಟಿಯಿಂದ ಎನ್.ಹರೀಶ್, ಪಕ್ಷೇತರರಾಗಿ ಜಿ.ಪಿ.ಶ್ರೀನಿವಾಸ, ಎಂ.ಸಿ.ಚಿದಂಬರ, ಕೆಂಪೇಗೌಡ, ಆಪ್‌ನಿಂದ ಸಿ.ಎಸ್.ವೆಂಕಟೇಶ್ ಹಾಗೂ ನಾಗಮಂಗಲ ಕ್ಷೇತ್ರದಿಂದ ಪಕ್ಷೇತರರಾಗಿ ಅನಿಕೇತನ್‌ಗೌಡ, ಕೆ.ಆರ್.ಪೇಟೆ ಕ್ಷೇತ್ರದಿಂದ ಜೆಡಿಎಸ್‌ನಿಂದ ಎಚ್.ಟಿ.ಮಂಜು, ಬಿಎಸ್ಪಿಯಿಂದ ಬಿ.ಡಿ.ಪ್ರದೀಪ್, ಪಕ್ಷೇತರರಾಗಿ ಕೆ.ಚಂದನ್‌ಗೌಡ ನಾಮಪತ್ರ ಸಲ್ಲಿಸಿದ್ದಾರೆ.
ಮಧುಗೆ ದೇವನೂರ ಸಾಥ್: ಮಂಡ್ಯದ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಎಸ್.ಸಿ.ಮಧುಚಂದನ್ ಅವರು ನಾಮಪತ್ರ ಸಲ್ಲಿಸಲು ಹಿರಿಯ ಸಾಹಿತಿ ದೇವನೂರು ಮಹದೇವು ಸಾಥ್ ನೀಡಿದರು. ಸರ್‌ಎಂವಿ ಪ್ರತಿಮೆ ಎದುರು ಜಮಾವಣೆಗೊಂಡ ರೈತ ಸಂಘದ ಕಾರ್ಯಕರ್ತರು ಹಾಗೂ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರೊಂದಿಗೆ ಮೆರವಣಿಗೆ ಮೂಲಕ ಸಾಗಿದ ಮಧುಚಂದನ್ ಚುನಾವಣಾಧಿಕಾರಿ ಎಸ್.ಎಚ್.ಕೀರ್ತನಾ ಅವರಿಗೆ ಉಮೇದುವಾರಿಕೆ ಸಲ್ಲಿಸಿದರು. ಈ ವೇಳೆ ದೇವನೂರ ಮಹದೇವು, ಚಾಮರಸಮಾಲೀ ಪಾಟೀಲ್ ಇತರರಿದ್ದರು. ಈಗಾಗಲೇ ಆನ್‌ಲೈನ್ ಮೂಲಕ ನಾಮಪತ್ರ ಸಲ್ಲಿಸಿದ ಮೊದಲ ಅಭ್ಯರ್ಥಿ ಎನ್ನುವ ಹೆಗ್ಗಳಿಗೆ ಮಧು ಅವರಿಗಿದೆ.
ದಳಕ್ಕೆ ಬಂಡಾಯದ ಬಿಸಿ: ಹಿರಿತನದ ಆಧಾರದ ಮೇಲೆ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಜೆಡಿಎಸ್ ಬಿ ಾರ್ಮ್ ನೀಡುವಂತೆ ಮಾಡಿದ ಮನವಿಗೆ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ನಗರಸಭೆ ಮಾಜಿ ಉಪಾಧ್ಯಕ್ಷ ಎಂ.ಜೆ.ಚಿಕ್ಕಣ್ಣ ಬುಧವಾರ ಉಮೇದುವಾರಿಕೆ ಸಲ್ಲಿಸಿದ್ದಾರೆ. ಜೆಡಿಎಸ್ ಮತ್ತು ಪಕ್ಷೇತರರನಾಗಿ ನಾಮಪತ್ರ ಸಲ್ಲಿಸಿದ್ದಾರೆ.