ಕಳೆದ ೨೪ ಗಂಟೆಯಲ್ಲಿ ೨೯.೪೭ ಮಿ.ಮೀ. ಮಳೆ

rain
Published on

ಮಡಿಕೇರಿ: ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೨೯.೪೭ ಮಿ.ಮೀ. ಮಳೆಯಾಗಿದೆ.

ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೩೭.೭೫ ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ ೨೧.೯೦ ಮಿ.ಮೀ, ಪೊನ್ನಂಪೇಟೆ ತಾಲೂಕಿನಲ್ಲಿ ಸರಾಸರಿ ೪೧.೪೪ ಮಿ.ಮೀ, ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ೩೨.೬೫, ಕುಶಾಲನಗರ ತಾಲೂಕಿನಲ್ಲಿ ಸರಾಸರಿ ೧೩.೬೦ ಮಿ.ಮೀ. ಮಳೆಯಾಗಿದೆ.

ಜಿಲ್ಲೆಯ ಹೋಬಳಿವಾರುಗಳಾದ ಮಡಿಕೇರಿ ಕಸಬಾ ೨೪, ನಾಪೋಕ್ಲು ೩೫, ಸಂಪಾಜೆ ೪೬, ಭಾಗಮಂಡಲ ೪೬, ವಿರಾಜಪೇಟೆ ೨೩.೮೦, ಅಮ್ಮತ್ತಿ ೨೦, ಹುದಿಕೇರಿ ೨೬.೭೦, ಶ್ರೀಮಂಗಲ ೭೧, ಪೊನ್ನಂಪೇಟೆ ೪೫, ಬಾಳೆಲೆ ೨೩.೦೬, ಸೋಮವಾರಪೇಟೆ ೩೬, ಶನಿವಾರಸಂತೆ ೧೯, ಶಾಂತಳ್ಳಿ ೬೦, ಕೊಡ್ಲಿಪೇಟೆ ೧೫.೬೦, ಕುಶಾಲನಗರ ೮.೨೦, ಸುಂಟಿಕೊಪ್ಪ ೧೯ ಮಿ.ಮೀ.ಮಳೆಯಾಗಿದೆ

ಹಾರಂಗಿ ಜಲಾಶಯದ ಗರಿಷ್ಠ ಮಟ್ಟ ೨೮೫೯ ಅಡಿಗಳಿದ್ದು, ಶನಿವಾರ ೨೮೫೮.೫೧ ಅಡಿ ನೀರು ಸಂಗ್ರವಾಗಿದೆ. ಇಂದಿನ ನೀರಿನ ಒಳಹರಿವು ೭೮೫೩ ಕ್ಯುಸೆಕ್ ಇದ್ದು, ನೀರಿನ ಹೊರ ಹರಿವು ನದಿಗೆ ೪೯೭೯ ಕ್ಯುಸೆಕ್, ನಾಲೆಗೆ ೫೦೦ ಕ್ಯುಸೆಕ್ ನೀರುಬಿಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net