

ಚಿಕ್ಕಮಗಳೂರು: ಎಐಟಿ ಸರ್ಕಲ್ನಿಂದ ಹಿರೇಮಗಳೂರು ಅಂಬೇಡ್ಕರ್ ವೃತ್ತದವರೆಗೆ 3.28 ಕಿಮೀ ರಸ್ತೆಯನ್ನು ದ್ವಿಪಥವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಸಿ.ಟಿ.ರವಿ ಹೇಳಿದರು.
ಎಐಟಿ ವೃತ್ತದಲ್ಲಿ ಮಂಗಳವಾರ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕಾಮಗಾರಿಗೆ 29.40 ಕೋಟಿ ರೂ. ಮಂಜೂರಾಗಿದ್ದು ಡಿವೈಡರ್, ಫುಟ್ಪಾತ್ ನಿರ್ವಣ, ವಿದ್ಯುತ್ ದೀಪ ಅಳವಡಿಸಿ ಬೈಪಾಸ್ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.
ಈ ರಸ್ತೆ ರಾಜ್ಯ ಹೆದ್ದಾರಿಯಾಗಿ ಘೊಷಣೆಯಾಗಿದೆ. ಹೆದ್ದಾರಿ ನಿಯಮದ ಪ್ರಾಧಿಕಾರ ರಸ್ತೆ ಮಧ್ಯದಿಂದ ಎರಡೂ ಬದಿ 70 ಅಡಿ ವಿಸ್ತರಿಸಬೇಕು. ಆದರೆ ಗ್ರಾಮಸ್ಥರು ಮತ್ತು ಜನಪ್ರತಿನಿಧಿಗಳೊಂದಿಗೆ ರ್ಚಚಿಸಿ ಸ್ಥಳೀಯರಿಗೆ ತೊಂದರೆಯಾಗಬಾರದು ಹಾಗೂ ಮತ್ತೊಂದು ಬೈಪಾಸ್ ರಸ್ತೆ ನಿರ್ವಿುಸುವ ಚಿಂತನೆ ಇರುವುದರಿಂದ ರಸ್ತೆ ಎರಡೂ ಬದಿ 40 ಅಡಿ ರಸ್ತೆ ಹಾಗೂ ಪಕ್ಕದಲ್ಲಿ ಚರಂಡಿ, ಪುಟ್ಪಾತ್, ಯುಜಿಡಿ, ಪೈಪ್ಲೈನ್ಗೆ 10 ಅಡಿ ಸೇರಿ ಒಟ್ಟು 50 ಅಡಿ ವಿಸ್ತರಿಸಲಾಗುತ್ತದೆ ಎಂದರು.
ರಸ್ತೆ ಅಗಲೀಕರಣದಿಂದ ಈ ರಸ್ತೆಯಲ್ಲಿ ಮೂರು ಮನೆ ಸಂಪೂರ್ಣ ಹಾಗೂ 12 ಮನೆಗಳು ಭಾಗಶಃ ತೆರವಾಗುತ್ತವೆ. 3 ಮನೆಯವರಿಗೆ ಬೇರೆ ಜಾಗ, ಜಮೀನು ಇಲ್ಲದಿರುವುದರಿಂದ ಬದಲಿ ವ್ಯವಸ್ಥೆ ಕಲ್ಪಿಸಲು ಜಿಲ್ಲಾಧಿಕಾರಿ ಜತೆ ರ್ಚಚಿಸಲಾಗಿದೆ. 12 ಮನೆಗಳ ಹಾನಿ ಪರಿಶೀಲಿಸಿ ಅಧಿಕಾರಿಗಳ ಜತೆ ಸಮಾಲೋಚಿಸಿ ಮಾನವೀಯ ನೆಲೆಯಲ್ಲಿ ಪರಿಹಾರ ಒದಗಿಸಲಾಗುತ್ತದೆ ಎಂದು ತಿಳಿಸಿದರು.