29.40 ಲಕ್ಷ ರೂ. ವರ್ಗಾಯಿಸಿಕೊಂಡು ವಂಚನೆ

cybe crime
Published on

ಹುಬ್ಬಳ್ಳಿ: ಹೆಚ್ಚಿನ ಲಾಭ ಗಳಿಸಲು ಸಹಾಯ ಮಾಡುತ್ತೇನೆ ಎಂದು ಹೇಳಿದ ಅಪರಿಚಿತರು, ನಗರದ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ 29.40 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ ಘಟನೆ ನಡೆದಿದೆ.

ನಗರದ ಶಿವಪ್ರಸಾದ ಕೆ. ವಂಚನೆಗೆ ಒಳಗಾದವರು. ಇಶಿಕಾ ಎಂಬುವವರು ವಾಟ್ಸ್ ಆ್ಯಪ್ ಮೂಲಕ ಸಂಪರ್ಕಿಸಿ, ತನಗೆ ಶೇರು ಮಾರುಕಟ್ಟೆ ಕುರಿತು ತಿಳಿದಿದೆ. ನಿಮಗೆ ಹೆಚ್ಚಿನ ಲಾಭವಾಗಲು ಸಹಾಯ ಮಾಡುತ್ತೇನೆ ಎಂದು ನಂಬಿಸಿದ್ದಾರೆ. ನಂತರ ಟೆಲಿಗ್ರಾಂ ಖಾತೆಗಳ ಮೂಲಕ ಪ್ಲಸ್‌ಗ್ಲೋಬಲ್500 ಸಿಎಸ್ ಎಂಬ ಖಾತೆಗಳ ಮೂಲಕ ವಿವಿಧ ಮಾಹಿತಿ ಕೊಟ್ಟು ನಂಬಿಸಿ, ಒಟ್ಟು 29,40,032 ರೂ. ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net