28ರಿಂದ ಮದ್ಯ ವರ್ಜನ ಉಚಿತ ಶಿಬಿರ

Published on

ಮೈಸೂರು: ಬಸವ ಮಾರ್ಗ ಫೌಂಡೇಷನ್‌ನಿಂದ ಅ.28 ರಿಂದ 21 ದಿನಗಳ ಕಾಲ ಮದ್ಯ ವರ್ಜನ ಕುರಿತು ಉಚಿತ ಶಿಬಿರ ಆಯೋಜಿಸಿದೆ ಎಂದು ಕಾರ್ಯಕ್ರಮದ ನಿರ್ವಾಹಕ ಮಹೇಶ್ ಹೇಳಿದರು.
ಶಿಬಿರದಲ್ಲಿ 50 ಜನರಿಗೆ ಅವಕಾಶವಿದ್ದು, ವೈದ್ಯರು, ಆಪ್ತ ಸಮಾಲೋಚಕರು, ಉತ್ತಮ ಆಹಾರ, ಪರಿಸರ, ನೈರ್ಮಲ್ಯ, ಕಾಳಜಿಯ ಆರೈಕೆ ಮೂಲಕ ಮನಪರಿವರ್ತನೆ ಮಾಡಿ ಕುಡಿತ ಬಿಡಿಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಿತ್ಯ ಯಾವುದಾದರೂ ಚಟುವಟಿಕೆಯಲ್ಲಿರುವಂತೆ ನೋಡಿಕೊಳ್ಳುವ ಮೂಲಕ ಕುಡಿತ ಮರೆಸಲಾಗುವುದು. ಈ ರೀತಿ ಹಿಂದಿನ ಶಿಬಿರಗಳಲ್ಲಿ ಪಾಲ್ಗೊಂಡ 1300 ಕ್ಕೂ ಹೆಚ್ಚು ಜನರು ಮದ್ಯ ತ್ಯಜಿಸಿದ್ದಾರೆ. ಆಹಾರ, ವಸತಿ ಉಚಿತವಾಗಿದ್ದು, ಅಗತ್ಯವಾದ ರಕ್ತ ಪರೀಕ್ಷೆ ಹಾಗೂ ಔಷಧಗಳಿಗೆ ಮಾತ್ರ ಹಣ ಪಡೆಯಲಾಗುವುದು. ಆಸಕ್ತರು ಮಾಹಿತಿಗೆ 98425 58477 ಅನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಸಂಸ್ಥೆಯ ಜಯರಾಂ, ಮಧು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net