ಸದ್ವರ್ತನೆಯಿಂದ ಸಮಾಜ ಸುಧಾರಣೆ

CTD MURUGAMATA----0031
Published on

ಚಿತ್ರದುರ್ಗ: ಮುರುಘಾ ಪರಂಪರೆಯ ಜಗದ್ಗುರುಗಳಲ್ಲಿ ನಾಲ್ಕನೇಯವರಾದ ಶ್ರೀ ಶಿರಹಟ್ಟಿ ಸಿದ್ಧಲಿಂಗ ಸ್ವಾಮೀಜಿ ಅವರ ವ್ಯಕ್ತಿತ್ವ ಅಪರೂಪದ್ದಾಗಿದೆ ಎಂದು ಶ್ರೀಮಠದ ಸಾಧಕ ಶ್ರೀಗಳಾದ ಬಸವ ಮುರುಘೇಂದ್ರ ಸ್ವಾಮೀಜಿ ಹೇಳಿದರು.

ಶ್ರೀ ಮಠದಲ್ಲಿ ಶ್ರಾವಣಮಾಸದ ಪ್ರಯುಕ್ತ ಬುಧವಾರ ಏರ್ಪಡಿಸಿದ್ದ ವಚನಾಭಿಷೇಕ, ವಚನ ಪಠಣ, ಪೀಠ ಪರಂಪರೆ ಸ್ವಾಮೀಜಿಗಳ ವ್ಯಕ್ತಿತ್ವ ಸಾಧನೆಯ ದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿ, ಸಿದ್ಧಲಿಂಗ ಶ್ರೀಗಳು ಜನಾನುರಾಗಿ, ಸತ್ಯ, ಸಹಜ, ಸದ್ಭಾವನೆ ಹಾಗೂ ಸದ್ವರ್ತನೆಯಿಂದ ಸಮಾಜ ಸುಧಾರಣೆಯಲ್ಲಿ ತೊಡಗಿಸಿಕೊಂಡಿದ್ದರು. ಅಭಿವೃದ್ಧಿ ಕೆಲಸಗಳಿಗೆ ಅಂದಿನ ಭಕ್ತರು, ರಾಜ ಮಹಾರಾಜರು ಅನೇಕ ಬಿರುದುಗಳನ್ನು ನೀಡಿದ್ದರು ಎಂದರು.

ಸಾನ್ನಿಧ್ಯ ವಹಿಸಿದ್ದ ಶ್ರೀಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಮಾತನಾಡಿ, ಸಿದ್ಧಲಿಂಗ ಶ್ರೀಗಳು ಆಯುರ್ವೇದ ಪಂಡಿತರಾಗಿ ಪ್ರಖ್ಯಾತಿ ಪಡೆದಿದ್ದರು ಎಂದರು.

ಎಸ್‌ಜೆಎಂ ವಸತಿಯುತ ಶಾಲೆಯ ಶಿಕ್ಷಕಿ ಎಸ್.ಅನಿತಾಕುಮಾರಿ ವಿಷಯಾವಲೋಕನ ಮಾಡಿದರು. ಬಿ.ಟಿ.ನಂದೀಶ್, ಎ.ಆರ್.ತಿಪ್ಪೇಸ್ವಾಮಿ, ಟಿ.ಪಿ.ಜ್ಞಾನಮೂರ್ತಿ ಇತರರು ಇದ್ದರು. ಜಮುರಾ ಕಲಾವಿದ ಉಮೇಶ್ ಪತ್ತಾರ್ ಪ್ರಾರ್ಥಿಸಿದರು. ವಚನ ಪ್ರಾರ್ಥನೆ ಶಿಕ್ಷಕಿ ಅನಿತಾ ಸ್ವಾಗತಿಸಿ, ಶಿಕ್ಷಕಿ ವೀಣಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net