

ಹುಕ್ಕೇರಿ: ಬಸವಣ್ಣನವರು ಹಾಗೂ ಹಡಪದ ಅಪ್ಪಣ್ಣ ಒಂದೇ ಜಾತಿ ಧರ್ಮಕ್ಕೆ ಸೀಮಿತವಾಗದೇ, ಎಲ್ಲ ಸಮುದಾಯಗಳಿಗೂ ಅನ್ವಯಿಸುವ ವಚನಗಳನ್ನು ರಚಿಸಿದ್ದಾರೆ ಎಂದು ಗ್ರೇಡ್-೨ ತಹಸೀಲ್ದಾರ್ ಪ್ರಕಾಶ ಕಲ್ಲೋಳಿ ಹೇಳಿದರು.
ಪಟ್ಟಣದ ತಾಲೂಕಾಡಳಿತ ಮತ್ತು ಹಡಪದ ಸಮುದಾಯದ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಿವಶರಣ ಹಡಪದ ಅಪ್ಪಣ್ಣನವರ ೮೯೧ನೇ ಜಯಂತಿ ಆಚರಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ತಾಲೂಕಿನ ಹಿಡಕಲ್ ಡ್ಯಾಂನ ದೂದ್ ನಾನಾ ಬುದ್ಧಿ ವಿಕಾಸ ಶಾಲೆಯ ಬುದ್ಧಿಮಾಂಧ್ಯ ಮಕ್ಕಳಿಗೆ ಉಚಿತ ಕ್ಷೌರ ಹಾಗೂ ಪ್ರಸಾದ ವ್ಯವಸ್ಥೆ ಮಾಡಲಾಯಿತು.
ಆನಂದ ಕುರ್ಲಿ, ರಮೇಶ ನಾವಿ, ಶಿವಾನಂದ ನಾವಿ, ರವಿ ಕೋರೆ, ವಿಠ್ಠಲ ನಾವಿ, ರಾಮಚಂದ್ರ ನಾವಿ, ಬಸು ಮುಗಳಿ, ಸಚಿನ ನಾವಿ, ವೀರಭದ್ರ ನಾವಿ, ವಿನೋದ ಯರನಾಳ, ಸುನೀಲ ಯರನಾಳ, ಜಿಲ್ಲಾ ಉಪಾಧ್ಯಕ್ಷ ಸಂತೋಷ ನಾವಿ, ಕಂದಾಯ ಇಲಾಖೆಯ ಅನಿತಾ ಎ.ಸಿ., ಎನ್.ಆರ್.ಪಾಟೀಲ, ಬಸವರಾಜ ನಾಂದೂರಕರ ಇತರರಿದ್ದರು.