28 ಮಂದಿಗೆ ಉದ್ಯೋಗ

Vishesh Nemkati Mela Photo
Published on

ಬೀದರ್: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ನೀಲಗಿರಿ ಉದ್ಯೋಗ ಮತ್ತು ತರಬೇತಿ ಕೇಂದ್ರದ ಸಹಯೋಗದಲ್ಲಿ ಇಲ್ಲಿಯ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಆಯೋಜಿಸಿದ್ದ ವಿಶೇಷ ನೇಮಕಾತಿ ಮೇಳದಲ್ಲಿ ಜಿಲ್ಲೆಯ 28 ಮಂದಿಗೆ ಉದ್ಯೋಗ ದೊರಕಿದೆ.
ಕಲಬುರಗಿಯ ಎಸ್.ಆರ್.ಜೆ. ಫೌಂಡೇಷನ್ ಹಾಗೂ ಬೀದರ್‍ನ ಮುತ್ತೂಟ್ ಫೈನಾನ್ಸ್ ಜಿಲ್ಲೆಯ ಅಭ್ಯರ್ಥಿಗಳನ್ನು ವಿದ್ಯಾರ್ಹತೆ, ಕೌಶಲ ಹಾಗೂ ಸಂದರ್ಶನ ಆಧರಿಸಿ ಶಿಕ್ಷಕ ಹಾಗೂ ಜ್ಯೂನಿಯರ್ ರಿಲೇಷನ್‍ಶಿಪ್ ಕಾರ್ಯ ನಿರ್ವಾಹಕ ಹುದ್ದೆಗೆ ಆಯ್ಕೆ ಮಾಡಿಕೊಂಡಿವೆ.
ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಬಸವರಾಜ ತನಿಖೆದಾರ, ಜಿಲ್ಲಾ ಉದ್ಯೋಗ ಸಂಯೋಜಕ ಸಂದೀಪ್ ಪಾಟೀಲ, ಉಮೇಶ ಗಾಯಕವಾಡ್, ನೀಲಗಿರಿ ಉದ್ಯೋಗ ಮತ್ತು ತರಬೇತಿ ಕೇಂದ್ರದ ಸಂಸ್ಥಾಪಕ ಸಾವಂತ ಸಾಗರ್, ಮಾನವ ಸಂಪನ್ಮೂಲ ಅಧಿಕಾರಿ ಆಶಾರಾಣಿ ಸಾವಂತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net