ನೀಟ್‌ನಲ್ಲಿ ಅನ್ವೇಷಣಾ ಕಾಲೇಜಿನ 28 ವಿದ್ಯಾರ್ಥಿಗಳು ಅರ್ಹತೆ

Published on

ಮೈಸೂರು: ನೀಟ್‌ನಲ್ಲಿ ಅನ್ವೇಷಣಾ ಪದವಿ ಪೂರ್ವ ಕಾಲೇಜಿನ 28 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ. ಅಲ್ಲದೆ ನೀಟ್ ಪರೀಕ್ಷೆಯ ಜತೆಗೆ ಸಿಇಟಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಎಚ್.ಎನ್.ಗಿರೀಶ್ ತಿಳಿಸಿದ್ದಾರೆ.
ನೀಟ್ ಪರೀಕ್ಷೆಯಲ್ಲಿ ಸ್ಪಂದನಾ ಸಿ.ವಿ, ಅಮೂಲ್ಯಾ ಕೆ.ಎಲ್, ಗಗನ್ ಟಿ.ಎಂ, ಅಲ್ಫಿಯಾ ರಿಯಾಜ್, ಐಶ್ವರ್ಯ ಕೆ., ಧನುಶ್ರೀ ಎಸ್. ವಿದ್ಯಾರ್ಥಿನಿಯರು ಉತ್ತಮ ಅಂಕಗಳನ್ನು ಪಡೆದಿದ್ದಾರೆ. ಸಿಇಟಿ ಪರೀಕ್ಷೆಯಲ್ಲಿ ಹತ್ತು ಸಾವಿರದೊಳಗೆ 10 ವಿದ್ಯಾರ್ಥಿಗಳು ರ‌್ಯಾಂಕ್ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.
ಸಿಇಟಿ ಪರೀಕ್ಷೆಯಲ್ಲಿ ವಿದ್ಯಾರ್ಥಿನಿ ಸ್ಪಂದನಾ ಸಿ.ವಿ 578ನೇ ರ‌್ಯಾಂಕ್, ಮೋಹನ್ ಘೋರ್ಪಡೆ 874ನೇ ರ‌್ಯಾಂಕ್, ರವಿತೇಜ ಎಚ್.ಟಿ 3060ನೇ ರ‌್ಯಾಂಕ್, ಅಮೃತಾ ಎನ್.ಎಸ್ 3377ನೇ ರ‌್ಯಾಂಕ್, ಅಮೂಲ್ಯಾ ಕೆ.ಎಲ್ 4472ನೇ ರ‌್ಯಾಂಕ್, ಪೂರ್ಣ ಕಮಲಾ 7469ನೇ ರ‌್ಯಾಂಕ್ ಪಡೆದಿದ್ದಾರೆ. ಸಿಇಟಿ ಹಾಗೂ ನೀಟ್ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದ ಎಲ್ಲ ವಿದ್ಯಾರ್ಥಿಗಳಿಗೂ ಸಂಸ್ಥೆಯ ಮುಖ್ಯಸ್ಥ ಎಚ್.ಕೆ.ಚಂದ್ರಮೋಹನ್, ಕಾರ್ಯದರ್ಶಿ ಎಚ್.ಸಿ.ಪ್ರಶಾಂತ್, ಉಪಪ್ರಾಂಶುಪಾಲೆ ಆಶಾ ನಂದೀಶ್ ಹಾಗೂ ಉಪನ್ಯಾಸಕರು ಶುಭ ಹಾರೈಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net