

ಹುಬ್ಬಳ್ಳಿ: ಹು-ಧಾ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ ದಕ್ಷಿಣ ಉಪವಿಭಾಗದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ವಶಕಪಡಿಸಿಕೊಂಡಿದ್ದ ಬೈಕ್‌ಗಳಲ್ಲಿ ಮೂಲ ಮಾಲೀಕರಿಗೆ ಕೆಲವು ಕೊಡಲಾಗಿದೆ. ಇನ್ನುಳಿದ 28 ಬೈಕ್‌ಗಳ ಸಮೇತ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ.
ಪೊಲೀಸ್ ಆಯುಕ್ತ ಎನ್. ಶಶಿಕುಮಾರ ನೇತೃತ್ವದಲ್ಲಿ ಅ. 26ರಂದು ವಿಶೇಷ ಕಾರ್ಯಾಚರಣೆ ನಡೆಸಲಾಗಿತ್ತು. ದಾಖಲಾತಿಗಳು ಇಲ್ಲದ 258 ಬೈಕ್ ಮತ್ತು 3 ಆಟೋಗಳನ್ನು ಜಪ್ತಿ ಮಾಡಲಾಗಿತ್ತು. ಆ ವಾಹನಗಳ ದಾಖಲಾತಿ ಪರಿಶೀಲಿಸಿದ ನಂತರ ಮೂಲ ಮಾಲೀಕರಿಗೆ ವಾಹನ ಕೊಟ್ಟು ದಾಖಲಾತಿ ಇಲ್ಲದ ವಾಹನಗಳಿಗೆ 1,66,500 ರೂ. ದಂಡ ವಿಧಿಸಲಾಗಿದೆ. ಸೀಜ್ ಮಾಡಿದ್ದ ವಾಹನಗಳ ಮಾಲೀಕರು ಬಾರದೇ ಇರುವ ಕಾರಣ 5 ಪೊಲೀಸ್ ಠಾಣೆಗಳಲ್ಲಿ ಒಟ್ಟು 13 ಎಫ್‌ಐಆರ್ ದಾಖಲಿಸಲಾಗಿದೆ.