

ಚಿತ್ರದುರ್ಗ: ಮುರುಘಾಮಠದಿಂದ ನಗರದ ಹೊರವಲಯ ಸೀಬಾರದಲ್ಲಿ ಶ್ರೀ ಜಗದ್ಗುರು ಗುರುಪಾದ ಮುರುಘರಾಜೇಂದ್ರ ಸ್ವಾಮೀಜಿ, ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ 70ನೇ ವರ್ಷದ ರಥೋತ್ಸವ ಹಾಗೂ ದನಗಳ ಜಾತ್ರೆ ಫೆ.27ರಂದು ಹಮ್ಮಿಕೊಳ್ಳಲಾಗಿದೆ. 27ರಿಂದ ಮಾರ್ಚ್ 14ರವರೆಗೆ ದನಗಳ ಜಾತ್ರೆ ನಡೆಯಲಿದೆ. ರಾಜ್ಯ, ಹೊರ ರಾಜ್ಯಗಳಿಂದ ವಿವಿಧ ತಳಿಯ ರಾಸುಗಳು ಸೇರಲಿವೆ. ಜಾತ್ರಾ ಸ್ಥಳದಲ್ಲಿ ನೀರು, ಬೆಳಕು ಮತ್ತು ಪಶುವೈದ್ಯಕೀಯ ಚಿಕಿತ್ಸೆ ಸೌಲಭ್ಯ ವಿರುತ್ತದೆ. ಹೋಟೆಲ್,ಅಂಗಡಿಗಳು, ಹೂವು ಮಾರಾಟ ಇತ್ಯಾದಿಗಳಿಗೆ ಜಾಗ ನಿಗದಿಪಡಿಸಲಾಗಿದೆ. ಜಾತ್ರಾ ಸ್ಥಳದಲ್ಲಿ ಮದ್ಯ, ಮಾಂಸ ಮಾರಾಟ ಮತ್ತು ಸೇವನೆ ನಿಷೇಧಿಸಲಾಗಿದೆ. ಹೆಚ್ಚಿನ ಮಾಹಿತಿಗೆ ವ್ಯವಸ್ಥಾಪಕರು, ಮುರುಘಾಮಠ(9880312595/ 9880577376)ಸಂಪರ್ಕಿಸುವಂತೆ ಪ್ರಕಟಣೆ ಕೋರಿದೆ.