27ರಂದು ರಾಜ್ಯಮಟ್ಟದ ಭರತನಾಟ್ಯ ಸ್ಪರ್ಧೆ

27ರಂದು ರಾಜ್ಯಮಟ್ಟದ ಭರತನಾಟ್ಯ ಸ್ಪರ್ಧೆ
Published on

 ಹಾಸನ:  ಶ್ರೀ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರ ಕತ್ತರಿಘಟ್ಟ, ಕೆಂಪೇಗೌಡ ವೇದಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಪ್ತಸಾಗರ ಕಲಾನಿಕೇತನ, ಕರ್ನಾಟಕ ರಾಜ್ಯ ಕಲಾವಿದರ ರಕ್ಷಣಾ ವೇದಿಕೆ ಸಂಯುಕ್ತಾಶ್ರಯದಲ್ಲಿ ಆ.27ರ ಭಾನುವಾರದಂದು ಚನ್ನರಾಯಪಟ್ಟಣದ ನವೋದಯ ವಿದ್ಯಾಸಂಘದ ಆವರಣದಲ್ಲಿ ರಾಜ್ಯಮಟ್ಟದ ಭರತನಾಟ್ಯ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಆನಂದ್ ಕಾಳೇಗೌಡ ತಿಳಿಸಿದರು.

ಭಾನುವಾರ ನಡೆಯುವ ರಾಜ್ಯಮಟ್ಟದ ಭರತನಾಟ್ಯ ಸ್ಪರ್ಧೆ ಕಾರ್ಯಕ್ರಮದಲ್ಲಿ ದಿವ್ಯಸಾನ್ನಿಧ್ಯವನ್ನು ಶಂಭುನಾಥ ಸ್ವಾಮೀಜಿ ಮತ್ತು ಮೆಳೆಯಮ್ಮ ಆಧ್ಯಾತ್ಮಿಕ ಕೇಂದ್ರ ಕತ್ತರಿಘಟ್ಟದ ಚಂದ್ರಶೇಖರ ಗುರೂಜಿ ಅವರು ವಹಿಸಲಿದ್ದಾರೆ. ಸಹಕಾರ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಉದ್ಘಾಟನೆ ನೆರವೇರಿಸಲಿದ್ದಾರೆ. ಶಾಸಕರಾದ ಸಿ.ಎನ್. ಬಾಲಕೃಷ್ಣ, ಎಚ್.ಡಿ. ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ, ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ, ಹಾಸನದ ಶಾಸಕ ಎಚ್.ಪಿ. ಸ್ವರೂಪ್ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸುಪ್ರದಾ ಅಕಾಡೆಮಿ ಆಫ್ ಫರ್ ಫಾಮಿರ್ಂಗ್ ಆರ್ಟ್ಸ್‌ನ ಡಾ. ರಮ್ಯಾ ಸೂರಜ್, ಸಪ್ತಸಾಗರ ಕಲಾನಿಕೇತನದ ಮೋನಿಷಾ ಈರೇಗೌಡ ನೃತ್ಯ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಪ್ರವೇಶ ದರ ನಿಗದಿ ಮಾಡಲಾಗಿದ್ದು, ಆನ್‌ಲೈನ್‌ಗೆ ಒಂದು ದರ ಹಾಗೂ ಸ್ಥಳದಲ್ಲಿ ನೋಂದಣಿಗೆ ಒಂದು ದರ ನಿಗದಿ ಮಾಡಲಾಗಿದೆ. ಏಕವ್ಯಕ್ತಿ ಭರತನಾಟ್ಯ 18 ವರ್ಷದೊಳಗಿನವರು ಆನ್‌ಲೈನ್ ದರ 750 ರೂ., ಸ್ಥಳದಲ್ಲಿ ನೋಂದಾಯಿಸುವವರು 1000 ರೂ. ಏಕವ್ಯಕ್ತಿ ಭರತನಾಟ್ಯ 18 ವರ್ಷ ಮೇಲ್ಪಟ್ಟವರು ಆನ್‌ಲೈನ್ ದರ 1 ಸಾವಿರ ರೂ., ಸ್ಥಳದಲ್ಲಿ ಪಾವತಿ 1500 ರೂ. ಸಮೂಹ ಭರತನಾಟ್ಯಕ್ಕೆ ಆನ್‌ಲೈನ್ ದರ 1500, ಸ್ಥಳದಲ್ಲಿ ನೋಂದಣಿಗೆ 2 ಸಾವಿರ ರೂ. ನಿಗದಿ ಮಾಡಲಾಗಿದೆ ಎಂದು ಹೇಳಿದರು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ. 9663109932, 9480237997, 9108252705 ಹಾಗೂ 9448237793 ಗೆ ಸಂಪರ್ಕಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಪ್ತಸಾಗರ ಕಲಾನಿಕೇತನದ ಮೋನಿಷಾ, ಇವರ ತಂದೆ ಈರೇಗೌಡ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net