

ಚಿತ್ರದುರ್ಗ: ಕಲುಷಿತ ನೀರು ಸೇವನೆಯಿಂದ ಸಾವು-ನೋವು ಸಂಭವಿಸಿದ ನಗರದ ಕವಾಡಿಗರಹಟ್ಟಿಯಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲು ರಾಜ್ಯ ಸರ್ಕಾರ 4 ಕೋಟಿ ರೂ.ಮಂಜೂರು ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕವಾಡಿಗರಹಟ್ಟಿಯಲ್ಲಿ ಒಳಚರಂಡಿ ವ್ಯವಸ್ಥೆ,ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣ,2.50ಲಕ್ಷ ಲೀ.ಸಾಮರ್ಥ್ಯದ ಓವರ್‌ಹೆಡ್‌ಟ್ಯಾಂಕ್ ನಿರ್ಮಾಣ,ಹೊಸದಾಗಿ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ,ಸಾಮೂಹಿಕ/ವೈಯ ಕ್ತಿಕ ಶೌಚಗೃಹಗಳ ನಿರ್ಮಾಣ ಮತ್ತಿತರ ಅಭಿವೃದ್ಧಿ ಕೆಲಸಗಳಿಗೆ ನಗರಾಭಿವೃದ್ಧಿ ಇಲಾಖೆ ಅನುದಾನ ಮಂಜೂರು ಮಾಡಿದ್ದು,ಕಾಮಗಾರಿ ಗಳಿಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು. ಇಲ್ಲಿ ಪರಿಶಿಷ್ಟ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದು,ವಸತಿ ರಹಿತರಿಗೆ ಮನೆ ಮಂಜೂರು ಮಾಡಲು ಸಮಾಜಕಲ್ಯಾಣ ಇಲಾಖೆ ಮುಂದಾಗಿದೆ. ಈ ಕುರಿತು ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಅವರೊಂದಿಗೆ ಚರ್ಚಿಸಲಾಗಿದೆ ಎಂದರು.
ಗೃಹಲಕ್ಷ್ಮೀಯೋಜನೆಗೆ ಆ.27ರಂದು ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಅದೇ ದಿನ ರಾಜ್ಯದೆಲ್ಲ ಜಿಲ್ಲಾ,ತಾಲೂಕು,ಗ್ರಾಮ ಮಟ್ಟದಲ್ಲೂ ಯೋಜನೆ ಉದ್ಘಾಟನಾ ಕಾರ‌್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ನಮ್ಮ ಜಿಲ್ಲೆಯಲ್ಲಿ 3,47,620 ಫಲಾನುಭವಿಗಳು ಯೋಜನೆಗೆ ನೋಂದಾಯಿಸಿಕೊಂಡಿದ್ದು,ನಮ್ಮ ಜಿಲ್ಲೆ ರಾಜ್ಯದಲ್ಲೇ 2ನೇ ಸ್ಥಾನದಲ್ಲಿದೆ.
ಭದ್ರಾಮೇಲ್ದಂಡೆ ಕಾಮಗಾರಿಗೆ ತೊಡಕಾಗಿರುವ ಅಬ್ಬಿನಹೊಳೆಯ ಸಮೀಪದ ಭೂಸ್ವಾಧೀನ ಸಮಸ್ಯೆಯನ್ನು ಬಗೆಹರಿಸುವುದಾಗಿ ಹೇಳಿದರು. ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ಆಡಳಿತಾತ್ಮಕ ಅನುಮೋದನೆ ಇಲ್ಲದೆ ಹೆಚ್ಚುವರಿ ಕಾಮಗಾರಿಗಳ ಮಂ ಜೂರು ಪ್ರಕರಣದ ಕುರಿತಂತೆ ವಿಸ್ತೃತ ತನಿಖೆ ನಡೆದಿದೆ ಎಂದರು.
ಕವಾಡಿಗರಹಟ್ಟಿ ದುರ್ಘಟನೆ ಕುರಿತ ಸಮಗ್ರ ವರದಿ 2 ದಿನಗಳಲ್ಲಿ ಕೈ ಸೇರಲಿದೆ ಎಂದು ಡಿಸಿ ದಿವ್ಯಾಪ್ರಭು ಹೇಳಿದರು. ಅಲ್ಲಿಯ ಹ ಲವು ನಿವಾಸಿಗಳ ಮನೆಗಳಿಗೆ ಖಾತೆ ಮಾಡಿಸಿಕೊಡುವ ಕುರಿತಂತೆ ಪರಿಶೀಲಿಸಲಾಗುವುದು ಎಂದರು. ಶಾಸಕ ಕೆ.ಸಿ.ವೀರೇಂದ್ರಪಪ್ಪಿ,ಜಿಪಂ ಸಿಇಒ ಸೋಮಶೇಖರ್,ಎಸ್‌ಪಿ ಕೆ.ಪರಶುರಾ ಮ,ಎಡಿಸಿ ಬಿ.ಟಿ.ಕುಮಾರಸ್ವಾಮಿ ಮತ್ತಿತರ ಅಧಿಕಾರಿಗಳಿದ್ದರು.