

ಚಿತ್ರದುರ್ಗ:ಚಿತ್ರದುರ್ಗ ತಾಲೂಕು ಕಸಾಪ ಅಧ್ಯಕ್ಷರ ಪದಗ್ರಹಣ ಮತ್ತು ಕೋಟೆ ನಾಡಿನ ಕೋಗಿಲೆಗಳು - ಸೀಸನ್ 1 ಕಾರ‌್ಯಕ್ರಮವನ್ನು ಅ.27 ರಂದು ಬೆಳಗ್ಗೆ 11ಗಂಟೆಗೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಆಯೋಜಿಸಲಾಗಿದೆ. ಈ ಕಾರ‌್ಯಕ್ರಮದಲ್ಲಿ ಜಿಲ್ಲೆಯ ಉತ್ತಮ ಹಾಡುಗಾರರನ್ನು ಗುರುತಿಸಿ,ಗೌರವಿಸಲಾಗುವುದು. ಮೊದಲ ಹಂತದಲ್ಲಿ ಸೀನಿಯರ್ ಮತ್ತು ಜೂನಿಯರ್ ವಿಭಾಗದಿಂದ ಆ ಯ್ದ 30 ಗಾಯಕರಿಗೆ ಅವಕಾಶವಿರುತ್ತದೆ. ಹಾಡುಗಳು ಕನ್ನಡದ ನಾಡು,ನುಡಿ,ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಬಿಂಬಿಸುವಂತಿರಬೇಕು.ಒಬ್ಬರಿ ಗೆ ಒಂದು ಹಾಡಿಗೆ ಮಾತ್ರ ಅವಕಾಶ. ಭಾಗವಹಿಸಿದ ಎಲ್ಲರಿಗೂ ಪ್ರಶಂಸಾ ಪತ್ರ ಹಾಗೂ ಉತ್ತಮ ಗಾಯಕರಿಗೆ ಬಹುಮಾನ ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 7892006495/ 9449510078ನ್ನು ಸಂಪರ್ಕಿಸಬಹುದೆಂದು ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ. ಶಿವಸ್ವಾಮಿ ತಿಳಿಸಿ ದ್ದಾರೆ.