27ಕ್ಕೆ ಮುಕ್ತ ವಿವಿಗೆ ನ್ಯಾಕ್ ಸಮಿತಿ ಭೇಟಿ

KSOU 6 DEC 19
Published on

ನ್ಯಾಕ್ ಸಮಿತಿ ಏ.27ಕ್ಕೆ ಮುಕ್ತ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಲಿದ್ದು, ಮೂರು ದಿನಗಳ ಕಾಲ ಪರಾಮರ್ಶೆ ನಡೆಸಲಿದೆ. ಮಾನದಂಡದ ಪ್ರಕಾರ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಗತ್ಯ ಮೂಲಕಸೌಕರ್ಯ ಕಲ್ಪಿಸಿಕೊಡಲಾಗಿದೆ. ಈಗಾಗಲೇ ಶೇ.80ರಷ್ಟು ಕೆಲಸ ಪೂರ್ಣಗೊಂಡಿದೆ. ಉಳಿದ ಶೇ.20ರಷ್ಟು ಕೆಲಸ ಇನ್ನೂ ಒಂದು ವಾರದಲ್ಲಿ ಪೂರ್ಣಗೊಳ್ಳಲಿದೆ ಎಂದು ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ತಿಳಿಸಿದರು.


ನ್ಯಾಕ್ ಸಮಿತಿ ಭೇಟಿಗೂ ಮುನ್ನವೇ ಆಂತರಿಕವಾಗಿ ಕಲ್ಪಿತ ಪರಿಶೀಲನಾ ಕಾರ್ಯ ನಡೆಯಲಿದ್ದು, ಶಿವಮೊಗ್ಗ, ತುಮಕೂರು, ಮೈಸೂರು ವಿವಿಯ ಪ್ರಾಧ್ಯಾಪಕರನ್ನು ಕರೆಸಿಕೊಂಡು ಇದನ್ನು ಕೈಗೊಳ್ಳಲಾಗುವುದು. ಈ ಸಂದರ್ಭದಲ್ಲಿ ಕಂಡುಬರುವ ಲೋಪದೋಷಗಳನ್ನು ಸರಿಪಡಿಸಿಕೊಳ್ಳುವ ಕೆಲಸ ಆಗಲಿದೆ ಎಂದರು.


ಹೊಸ ಕೋರ್ಸ್ ಪ್ರಾರಂಭಿಸಲು ಯುಜಿಸಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಅನುಮೋದನೆ ದೊರೆತರೆ ಡಾಟಾ ಸೈನ್ಸ್, ಎಂಸಿಎ, ಸೈಬರ್ ಸೆಕ್ಯೂರಿಟಿ, ಬಿಎಸ್‌ಡಬ್ಲುೃ, ಎಂಎಸ್‌ಡಬ್ಲುೃ, ಭೂವಿಜ್ಞಾನ ಕೋರ್ಸ್ ಆರಂಭಿಸಲಾಗುವುದು ಎಂದರು.


ವಿವಿ ಶೈಕ್ಷಣಿಕ ಚಟುವಟಿಕೆಗಳನ್ನು ವಿಸ್ತರಣೆಗಾಗಿ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಪ್ರಾದೇಶಿಕ ಕೇಂದ್ರ ತೆರೆಯಲಾಗುವುದು. ಜತೆಗೆ, ಮೂಲಸೌಕರ್ಯ ಇರುವ ವಿದ್ಯಾಸಂಸ್ಥೆಯಲ್ಲಿ ಅಧ್ಯಯನ ಕೇಂದ್ರ ತೆರೆಯಲು ಕ್ರಮ ವಹಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net