ರಟ್ಟಿಹಳ್ಳಿಯಲ್ಲಿ 278 ಜನರಿಂದ ರಕ್ತದಾನ

RAKTADANA SHIBHIR
Published on

ರಟ್ಟಿಹಳ್ಳಿ: ಸಮುದಾಯ ಆರೋಗ್ಯ ಕೇಂದ್ರ, ಜಿಲ್ಲಾ ರಕ್ತ ನಿಧಿ ಕೇಂದ್ರ, ಸ್ಥಳೀಯ ವಿವಿಧ ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳು ಹಾಗೂ ನೌಕರರ ಸಂಘದಿಂದ ಸ್ಥಳೀಯ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಏರ್ಪಡಿಸಿದ್ದ ಬೃಹತ್ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಜಿಲ್ಲೆಯಲ್ಲಿಯೇ ದಾಖಲೆಯಂತೆ 278 ಜನರು ರಕ್ತದಾನ ಮಾಡಿದರು.

ಸ್ಥಳೀಯ ಆಡಳಿತ ವೈದ್ಯಾಧಿಕಾರಿ ಡಾ.ಲೋಕೇಶ ಕುಮಾರ ಮಾತನಾಡಿ, ಜಿಲ್ಲೆಯಲ್ಲಿ 18 ವರ್ಷಗಳ ರಕ್ತ ನಿಧಿ ಕೇಂದ್ರದ ಇತಿಹಾಸದಲ್ಲಿ ಅತಿ ಹೆಚ್ಚು ರಕ್ತ ಸಂಗ್ರಹಿಸಿದ ದಾಖಲೆ ರಟ್ಟಿಹಳ್ಳಿ ರಕ್ತದಾನಿಗಳ ಬಳಗ ಮತ್ತು ಈ ಶಿಬಿರಕ್ಕೆ ಸಲ್ಲುತ್ತದೆ. 278 ಜನರು ಈ ಶಿಬಿರದಲ್ಲಿ ರಕ್ತದಾನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ವರ್ಷಕ್ಕೆ 2 ಬಾರಿಯಾದರೂ ರಕ್ತದಾನ ಶಿಬಿರ ಹಮ್ಮಿಕೊಳ್ಳಲು ಆಯೋಜಕರು ಒಪ್ಪಿಕೊಂಡಿದ್ದಾರೆ ಎಂದರು.

ಲಯನ್ಸ್ ಕ್ಲಬ್ ಪದಾಧಿಕಾರಿಗಳು, ಕಂಪು ಸಹಪಾಠಿಗಳ ಬಳಗ, ಪ್ರಿಯದರ್ಶಿನಿ ಕಾಲೇಜ್, ನಮ್ಮೂರು ನಮ್ಮವರು ಬಳಗ, ವಿಶ್ವ ಹಿಂದು ಪರಿಷತ್ ಬಜರಂಗದಳ, ಆರ್ಯವೈಶ್ಯ ಸಮಾಜ, ಶ್ರೀ ವೀರಭದ್ರೇಶ್ವರ ಟ್ರಸ್ಟ್, ಶಿವ ಪತ್ತಿನ ಸಹಕಾರಿ ಸಂಘ, ಕುಮದ್ವತಿ ಮಹಿಳಾ ಸಹಕಾರಿ ಸಂಘ, ಎಚ್​ಡಿಎಫ್​ಸಿ, ಪಟ್ಟಣದ ನಕ್ಷತ್ರ, ಕಲ್ಪವೃಕ್ಷ, ಕುಮಾರೇಶ್ವರ ಗೆಳೆಯರ ಬಳಗ, ಆಟೋ ಚಾಲಕರು, ಎಲ್ಲಾ ಧಾರ್ವಿುಕ ಮತ್ತು ವಿವಿಧ ಸಮಾಜದ ಮುಖಂಡರು ಹಾಗೂ ನೌಕರರ ಬಳಗದವರು ಸಹಕಾರ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net