

ಕಲಬುರಗಿ: ಕಮಲಾಪುರ ತಾಲೂಕಿನ ಕಣ್ಣೂರ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಲೋಕಾರ್ಪಣೆ ಮೇ 4ರಂದು ಬೆಳಗ್ಗೆ 11ಕ್ಕೆ ನಡೆಯಲಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ಪುರಸತ ಎಸ್.ಜಿ.ಭಾರತಿ ಹೇಳಿದರು. 7.5 ಅಡಿ ಎತ್ತರದ ಪಂಚಲೋಹ ಪ್ರತಿಮೆಯನ್ನು 13 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದು, ಮುತ್ಯಾನ ಬಬಲಾದದ ಶ್ರೀ ಗುರುಪಾದಲಿಂಗ ಶಿವಯೋಗಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ಬಸವರಾಜ ಮತ್ತಿಮಡು ಲೋಕಾರ್ಪಣೆ ಮಾಡಲಿದ್ದಾರೆ. ಸಂಸದ ಡಾ.ರಾಧಾಕೃಷ್ಣ ದೊಡ್ಡಮನಿ ಜ್ಯೋತಿ ಬೆಳಗಿಸಲಿದ್ದಾರೆ. ಎಸ್.ಜಿ.ಭಾರತಿ ಸಮಾರಂಭದ ಅಧ್ಯಕ್ಷತೆ ವಹಿಸುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮೇಯರ್ ಯಲ್ಲಪ್ಪ ನಾಯ್ಕೋಡಿ, ಸುರೇಶ ಶಮಾರ್, ಹೋರಾಟಗಾರ ಡಿ.ಜಿ.ಸಾಗರ, ಮುಖಂಡರಾದ ಅರ್ಜುನ ಭದ್ರೆ, ಶಿವಪ್ರಭು ಪಾಟೀಲ್, ವೈಜನಾಥ ತಡಕಲ್, ಬಸವರಾಜ ಮಾಲಿಪಾಟೀಲ್, ಸತೀಶ ಸೋರಡೆ ಲಾಡಮುಗಳಿ, ಸಂಗಮೇಶ ವಾಲಿ, ಸುರೇಶ ಹಾದಿಮನಿ, ಗಣೇಶ ಚಿಕ್ಕನಾಯಕ ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು. ಅತಿಥಿಗಳಾಗಿ ಪಿಎಸ್ಐ ಆಶಾ ರಾಠೋಡ, ಶಿವಕುಮಾರ ಪಸಾರ, ಪಾರ್ವತಿ ಹೋಳಕರ ಸೇರಿ ಗಣ್ಯರು ಪಾಲ್ಗೊಳ್ಳಲಿದ್ದು, ಸುತ್ತಲಿನ 38 ಹಳ್ಳಿಗಳ ಅಂಬೇಡ್ಕರ್ ಅಭಿಮಾನಿಗಳಿಗೆ ಆಹ್ವಾನ ನೀಡಲಾಗಿದೆ ಎಂದರು. ಡಾ.ಬಾಬುರಾವ ಸಾಗರ, ಬಸವರಾಜ ಕಣ್ಣೂರ, ಭೀಮಶಾ ಜ್ಯೋತಿ, ಮಲ್ಲಿನಾಥ ಶೆಟ್ಟಿ, ಲೋಕೇಶ ಇದ್ದರು.