ರೈತರಿಗೆ 270 ಕೋಟಿ ರೂ. ಹೆಚ್ಚುವರಿ ಸಾಲ

8 TKE 1,1(1)
Published on

ತರೀಕೆರೆ: ನಮ್ಮ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ಮೇಲೆ ರೈತರಿಗೆ 270 ಕೋಟಿ ರೂ. ಹೆಚ್ಚುವರಿ ಸಾಲ ನೀಡಲಾಗಿದೆ ಎಂದು ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಎಸ್.ಸುರೇಶ್ ಹೇಳಿದರು.

ಬುಕ್ಕಾಂಬುದಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಪಿಎಸಿಎಸ್ ಕಟ್ಟಡ ಹಾಗೂ ಸಿಡಿಸಿಸಿ ಬ್ಯಾಂಕ್ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ಕ್ಷೇತ್ರಕ್ಕೆ ಹೆಚ್ಚುವರಿ ಸಾಲ ನೀಡಿರುವ ಸಲುವಾಗಿ ಸಿಡಿಸಿಸಿ ಬ್ಯಾಂಕ್ ರಾಜ್ಯದ 2ನೇ ಉತ್ತಮ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈವರೆಗೆ ಗೋದಾಮು, ಹೊಸ ಕಟ್ಟಡ ನಿರ್ಮಾಣಕ್ಕೆ ಶೇ.4ರ ಬಡ್ಡಿ ದರದಲ್ಲಿ ಸಾಲ ನೀಡಲಾಗಿದ್ದು, ಸದ್ಯದಲ್ಲೇ ಮೂಲ ಸೌಕರ್ಯ ಕಲ್ಪಿಸಿಕೊಳ್ಳಲು ಪ್ರತಿ ಪಿಎಸಿಎಸ್‌ಗೆ 2 ಲಕ್ಷ ರೂ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಆರ್.ಆನಂದಪ್ಪ ಮಾತನಾಡಿ, ಪಿಎಸಿಎಸ್‌ಗಳು ಕೇವಲ ಸಾಲ ಸೌಲಭ್ಯ, ಪಡಿತರ ವಿತರಣೆಗೆ ಸೀಮಿತವಾಗದೆ, ಕೃಷಿ ಚಟುವಟಿಕೆಗೆ ಪೂರಕವಾಗುವ ಸಲಕರಣೆ ಮಾರಾಟ ಮಾಡಬೇಕು. ಈ ಮೂಲಕ ಪ್ರಗತಿ ಸಾಧಿಸಿ ಮಾದರಿ ಹೆಜ್ಜೆ ಇಡಬೇಕು ಎಂದರು.

ಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಟಿ.ಎಲ್.ರಮೇಶ್, ಕೆ.ಗಿರೀಶ್ ಚವ್ಹಾಣ್, ಪಿಎಸಿಎಸ್ ಅಧ್ಯಕ್ಷ ಕೆ.ಸಿ.ತಿಮ್ಮಯ್ಯ, ಮಾಜಿ ಅಧ್ಯಕ್ಷ ಕೆ.ಬಿ.ಶಿವಮೂರ್ತಪ್ಪ, ಪ್ರಮುಖರಾದ ಡಿ.ಎಚ್.ರೇವಣ್ಣ, ಎನ್.ಬಿ.ಸಿದ್ದಬಸಪ್ಪ, ಡಿ.ಎಚ್.ಸಂಗಪ್ಪ, ಕೆ.ಸಿ.ಲಿಂಗರಾಜು, ಡಿ.ಪಿ.ರಾಜಪ್ಪ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕಿ ಚಂದ್ರಕಲಾ, ಸಿಇಒ ಎನ್.ಬಿ.ಕರಿಬಸಪ್ಪ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net