ಕರೊನಾ ನಿಯಮ ಗಾಳಿಗೆ ತೂರಿ ಅಂದರ್​ ಬಾಹರ್ ! 27 ಜನರ ಬಂಧನ

cards
Published on

ಬೆಂಗಳೂರು : ಕರೊನಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲಾಕ್​ಡೌನ್ ಜಾರಿಯಲ್ಲಿದ್ದರೂ ಸಾಮಾಜಿಕ ಅಂತರವನ್ನೂ ಗಾಳಿಗೆ ತೂರಿ, ಹೋಟೆಲ್​ ಒಂದರಲ್ಲಿ ಅಂದರ್​ ಬಾಹರ್​ ಜೂಜಾಟ ಆಡುತ್ತಿದ್ದ 27 ಜನರನ್ನು ಬೆಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.

ಓಲ್ಡ್​ ಮದ್ರಾಸ್ ರೋಡ್​ನಲ್ಲಿರುವ ಪಾಮ್​ಟ್ರೀ ಹೋಟೆಲ್​ನ 5ನೇ ಮಹಡಿಯಲ್ಲಿ ಇಸ್ಪೀಟ್​ ಎಲೆಗಳಿಂದ ಜೂಜಾಡುತ್ತಿರುವ ಬಗ್ಗೆ ಪಡೆದ ಮಾಹಿತಿಯ ಮೇರೆಗೆ ನಿನ್ನೆ ನಗರ ಅಪರಾಧ ವಿಭಾಗ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಅಂದರ್​ ಬಾಹರ್​ ಆಟದಲ್ಲಿ ತೊಡಗಿದ್ದ 27 ಜನರನ್ನು ಬಂಧಿಸಿ, ಜೂಜಿಗೆ ಇಡಲಾಗಿದ್ದ 5 ಲಕ್ಷ 4 ಸಾವಿರ ರೂಪಾಯಿಗಳನ್ನು ಜಪ್ತಿಪಡಿಸಿಕೊಳ್ಳಲಾಗಿದೆ. ಹಲಸೂರು ಪೊಲೀಸ್​ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net