27 ದಿನ ಆದಿಶಕ್ತಿ ಗೌರಮ್ಮ ದೇವಿಯ ಆರಾಧನೆ

25_Ravandur_Ganesha
Published on

ರಾವಂದೂರು: ಪಿರಿಯಾಪಟ್ಟಣ ತಾಲೂಕಿನ ಕೆಲ್ಲೂರು ಗ್ರಾಮದಲ್ಲಿ ಆದಿಶಕ್ತಿ ಗೌರಮ್ಮ ತಾಯಿಯ ಜಾತ್ರಾ ಮಹೋತ್ಸವ 27 ದಿನಗಳ ಕಾಲ ವಿಜೃಂಭಣೆಯಿಂದ ಜರುಗಲಿದೆ.

ಗೌರಮ್ಮ ತಾಯಿಯ ಮೂರ್ತಿಯನ್ನು ಗೌರಿ ಹಬ್ಬದ ದಿನ ಆ.26ರಂದು ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗುತ್ತೆ. ಈ ವೇಳೆ ಗ್ರಾಮದ ಮಹಿಳೆಯರು ದೇವಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಗ್ರಾಮದ ಮುಖಂಡರು ಮತ್ತು ಯುವಕರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಸೌಹಾರ್ದತೆಯಿಂದ ಗೌರಮ್ಮ ತಾಯಿ ಜಾತ್ರಾ ಮಹೋತ್ಸವವನ್ನು ನೆರವೇರಿಸಲಿದ್ದಾರೆ.

27 ದಿನಗಳ ಕಾಲ ಪ್ರತಿದಿನವೂ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಲಿದೆ. ನೂರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಭಕ್ತಾದಿಗಳಿಗೆ ಪ್ರತಿದಿನವೂ ಅನ್ನದಾಸೋಹ ಇರಲಿದೆ. ಸೆ.21ರಂದು ಆದಿಶಕ್ತಿ ಗೌರಮ್ಮ ಮೂರ್ತಿಯನ್ನು ಭವ್ಯ ಮೆರವಣಿಗೆ ನಡೆಯಲಿದ್ದು, ಸೆ.22ರ ಸೋಮವಾರ ಬೆಳಗ್ಗೆ ಗೌರಮ್ಮ ಮೂರ್ತಿಯನ್ನು ಗೌರಿ ಕೆರೆಯಲ್ಲಿ ವಿಸರ್ಜಿಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net