ತನಿಖೆ ವೇಳೆ ವಾಹನದಲ್ಲಿದ್ದ ಜಾನುವಾರುಗಳನ್ನು ವಧೆ ಮಾಡುವ ಉದ್ದೇಶದಿಂದ ಹಾವೇರಿಯಿಂದ ಕೇರಳ ರಾಜ್ಯದ ತಲಿಪರಂಬು ಎಂಬಲ್ಲಿಗೆ ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಜಾನುವಾರು ಸಾಗಾಟ ಮಾಡಲು ಯಾವುದೇ ಪರವಾನಗಿ, ಆರೋಗ್ಯ ಪ್ರಮಾಣಪತ್ರ, ಅಥವಾ ಅಗತ್ಯ ದಾಖಲೆಗಳು ಇರಲಿಲ್ಲ. ಅಲ್ಲದೆ ಅತ್ಯಂತ ಕ್ರೂರ ಹಾಗೂ ಅಮಾನವೀಯ ರೀತಿಯಲ್ಲಿ ಒತ್ತೊತ್ತಾಗಿ ವಾಹನದಲ್ಲಿ ಕಟ್ಟಿ ತುಂಬಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.