152 ವಿದ್ಯಾರ್ಥಿಗಳಿಗೆ 27.81 ಲಕ್ಷ ರೂ.ನೆರವು

8 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಜೆಎಸ್​ಎಸ್​ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಇಲ್ಲಿನ ವಿದ್ಯಾಪೋಷಕ ಸಂಸ್ಥೆಯ ಮೆರಿಟ್​ ಯೋಜನೆ ಅಡಿ 152 ವಿದ್ಯಾರ್ಥಿಗಳಿಗೆ 27.81 ಲಕ್ಷ ರೂ. ಆರ್ಥಿಕ ನೆರವು ನೀಡಲಾಯಿತು.
ಅತಿಥಿಗಳಾಗಿ ಪಾಲ್ಗೊಂಡಿದ್ದ ಎಸ್​.ಎಂ. ಶಿವಪ್ರಸಾದ, ರಾವೇಂದ್ರ ತಿಕೂಟ, ಶ್ರೀಕಾಂತ ಕಲಗೋಡ, ಅನುಪಮ ವೈ,, ವೀರೇಶ ಹುಗ್ಗಿ ಮಾತನಾಡಿ, ಸಂಸ್ಥೆ ಅತ್ಯಂತ ಉತ್ತಮ ಕಾರ್ಯ ಮಾಡುತ್ತಿದೆ. ಮಕ್ಕಳು ಈ ಸೌಲಭ್ಯಗಳನ್ನು ಪಡೆದುಕೊಂಡು ಸಾಧನೆ ಮಾಡುವ ಮೂಲಕ ಸಂಸ್ಥೆಗೂ ಉತ್ತಮ ಹೆಸರು ತರಬೇಕು ಎಂದರು.
ಸಂಸ್ಥೆಯಿಂದ ಆರ್ಥಿಕ ನೆರವು ಪಡೆದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿ ಸೃಷ್ಟಿ ಹಿರೇಮಠ, ಮುರಗಯ್ಯ ಜಿ. ಮಾತನಾಡಿ, ಗ್ರಾಮೀಣ ಪ್ರದೇಶದಿಂದ ಬಂದ ನಾವು, ಕುಟುಂಬದ ಆರ್ಥಿಕ ಸಮಸ್ಯೆಯಿಂದ ಶೈಕ್ಷಣಿಕ ಜೀವನ ಇಲ್ಲಿಗೆ ಮುಕ್ತಾಯವಾಗಿತ್ತು ಎಂದು ತಿಳಿದುಕೊಂಡಿದ್ದೆವು. ಆದರೆ ಸಂಸ್ಥೆಯಿಂದ ಶೈಕ್ಷಣಿಕ ಜೀವನ ಇಂದು ಮುಂದುವರೆಯಲು ಸಾಧ್ಯವಾಗಿದೆ ಎಂದರು.
ವಿದ್ಯಾಪೋಷಕದ ದಾನಿಗಳು, ಸ್ವಯಂ ಸೇವಕರು, ವಿದ್ಯಾಪೋಷಕ ಸಮುದಾಯದ ಸದಸ್ಯರು, ಸಿಬ್ಬಂದಿ ಇತರರು ಇದ್ದರು. ರತ್ನಾ ಹಿಪ್ಪರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net