

ಮಡಿಕೇರಿ: ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡಂತೆ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೨೭.೫೬ ಮಿ.ಮೀ. ಮಳೆಯಾಗಿದೆ.
ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೪೪.೩೦ ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ ೨೮.೨೮ ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ೧೦.೧೦ ಮಿ.ಮೀ. ಮಳೆಯಾಗಿದೆ. ಜಿಲ್ಲೆಯ ಹೋಬಳಿವಾರುಗಳಾದ ಮಡಿಕೇರಿ ಕಸಬಾ ೩೫.೬೦, ನಾಪೋಕ್ಲು ೩೫.೬೦, ಸಂಪಾಜೆ ೪೩, ಭಾಗಮಂಡಲ ೬೩, ವಿರಾಜಪೇಟೆ ಕಸಬಾ ೨೪.೪೦, ಹುದಿಕೇರಿ ೪೧.೯೦, ಶ್ರೀಮಂಗಲ ೪೪.೪೦ ಪೊನ್ನಂಪೇಟೆ ೨೦, ಅಮ್ಮತ್ತಿ ೯, ಬಾಳೆಲೆ ೩೦, ಸೋಮವಾರಪೇಟೆ ಕಸಬಾ ೭, ಶನಿವಾರಸಂತೆ ೮.೪೦, ಶಾಂತಳ್ಳಿ ೨೩, ಕೊಡ್ಲಿಪೇಟೆ ೧೨, ಕುಶಾಲನಗರ ೨.೨೦, ಸುಂಟಿಕೊಪ್ಪ ೮ ಮಿ.ಮೀ.ಮಳೆಯಾಗಿದೆ.
ಹಾರಂಗಿ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ ೨೮೫೯ ಅಡಿಗಳಿದ್ದು, ಶುಕ್ರವಾರ ೨೮೫೫.೮೬ ಅಡಿ ನೀರು ಸಂಗ್ರವಾಗಿದೆ. ಇಂದಿನ ನೀರಿನ ಒಳಹರಿವು ೨೦೪೫ ಕ್ಯುಸೆಕ್ ಇದ್ದು, ನೀರಿನ ಹೊರ ಹರಿವು ನದಿಗೆ ೨೦೦, ನಾಲೆಗೆ ೫೦ ಕ್ಯುಸೆಕ್ ಇದೆ.