ಮೈಸೂರು: ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ, ಕ್ರೆಡಯ್ ಮೈಸೂರಿನಿಂದ ಮೇ 26ರಿಂದ 29ರ ವರೆಗೆ ಮೆಗಾ ಪ್ರಾಪರ್ಟಿ ಎಕ್ಸ್‌ಪೋ ‘ಮೈರಿಯಾಲಿಟಿ-2023’ ಆಯೋಜಿಸಲಾಗಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ಮೇಳ ನಡೆಯಲಿದ್ದು, ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ಎಲ್ಲ ವಿಭಾಗಗಳು ಒಂದೇ ಸೂರಿನಡಿ ಲಭ್ಯ ಇರಲಿವೆ ಎಂದು ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಅಧ್ಯಕ್ಷ ಉದಯ್ ಎಸ್.ಕುಮಾರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಳಗ್ಗೆ 10 ರಿಂದ ರಾತ್ರಿ 8.30ರವರೆಗೆ ಸಾರ್ವಜನಿಕರಿಗೆ ಪ್ರವೇಶವಿದ್ದು, ಈ ಎಕ್ಸಪೋನಲ್ಲಿ ಅಪಾರ್ಟೆಂಟ್, ಲೇಔಟ್ ಡೆವಲಪರ್ಸ್‌ಗಳು, ಅಭಿವೃದ್ಧಿ ಪಡಿಸಿರುವ ವಿವಿಧ ಲೇಔಟ್‌ಗಳು, ಅಪಾರ್ಟ್‌ಮೆಂಟ್‌ಗಳು, ಗುಂಪು ಮನೆಗಳು ಹಾಗೂ ವಿಲ್ಲಾಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದರು.
ಎಕ್ಸ್‌ಪೋದಲ್ಲಿ ಬ್ಯಾಂಕುಗಳು ಮತ್ತು ವಿಮಾ ಕಂಪನಿಗಳು ಹಣಕಾಸಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಲಿವೆ. ನಾಲ್ಕು ಪ್ಲಾಟಿನಂ ಸ್ಟಾಲ್‌ಗಳು, 4 ಗೋಲ್ಡ್, 4 ಸಿಲ್ವರ್ ಮತ್ತು 25 ಸಾಮಾನ್ಯ ಸ್ಟಾಲ್‌ಗಳು ಇರಲಿವೆ. 15 ವರ್ಷದಿಂದ ಈ ಮೆಗಾ ಮೇಳ ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಆಯೋಜಕರಾದ ನಾಗರಾಜ್ ಭೈರಿ, ಶ್ರೀಹರಿ, ಮುರಳೀಧರ್, ಕೆ.ಸಿ.ನಂದಕುಮಾರ್, ಎಂ.ಎಸ್.ಬಾಲಜಿ ಇದ್ದರು.