

ಚಿತ್ರದುರ್ಗ:ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಕೆ.ಪರಶುರಾಮ ಅವರ ಅಧ್ಯಕ್ಷತೆ ವಿದ್ಯಾನ ಗರದ ವೀರಸಾರ್ವಕರ್ ಪಾರ್ಕ್ ಶ್ರೀ ವಿದ್ಯಾಗಣಪತಿ ಸಭಾಗಣದಲ್ಲಿ ಮೇ 26ರಂದು ಸಂಜೆ 4ಗಂಟೆಗೆ ಏರ್ಪಡಿಸಲಾಗಿದೆ. ಈ ಮಹಾಸ ಭೆಯಲ್ಲಿ ಈ ಬಾರಿಯ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.85ಕ್ಕೂ ಅಧಿಕ ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾ ನಗರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಏರ್ಪಡಿಸಲಾಗಿದೆ. ಸಂಘದ ಸದಸ್ಯರು ತಪ್ಪದೇ ಮಹಾಸಭೆಯಲ್ಲಿ ಪಾಲ್ಗೊಳ್ಳಬೇಕು ಹಾಗೂ ಪ್ರತಿಭಾಪುರಸ್ಕಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಟಿ.ಪಿ. ಜ್ಞಾನಮೂರ್ತಿ(9449974004) ಅವರನ್ನು ಸಂಪರ್ಕಿಸಬಹುದೆಂದು ಸಂಘದ ಕಾರ್ಯದರ್ಶಿ ಗಾಯತ್ರಿ ಶಿವರಾಂ ತಿಳಿಸಿದ್ದಾರೆ.