26ರಂದು ರಜತಮಹೋತ್ಸವ ಲಾಂಛನ ಅನಾವರಣ,ರಕ್ತದಾನ ಶಿಬಿರ

PHOTO-1--02
Published on

ಚಿತ್ರದುರ್ಗ:ಚಿತ್ರದುರ್ಗ ತಾಲೂಕು ಸೀಬಾರ-ಗುತ್ತಿನಾಡಿನ ವಿಶ್ವಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆಯ ರಜತ ಮಹೋತ್ಸವದ ಅಂಗವಾಗಿ ಸಂಸ್ಥೆ ಆವರಣದಲ್ಲಿ ಆ.26ರಂದು ಬೆಳಗ್ಗೆ 11ಕ್ಕೆ ರಜತ ಮಹೋತ್ಸವದ ಲಾಂಛನ ಅನಾವರಣ ಸಮಾರಂಭ ಹಾಗೂ ಬೃಹತ್‌ರಕ್ತ ದಾನ ಶಿಬಿರವನ್ನು ಏರ್ಪಡಿಸಲಾಗಿದೆ. ಸಮಾರಂಭದ ಸಾನ್ನಿಧ್ಯ ವಹಿಸಲಿರುವ ಸಾಣೇಹಳ್ಳಿ ಡಾ.ಶ್ರೀ ಪಂಡಿರಾರಾಧ್ಯ ಶಿವಾಚಾರ‌್ಯ ಸ್ವಾಮೀಜಿ ಅವರು ಲಾಂಛನ ಅನಾವರಣಗೊಳಿಸುವರು. ಸಂಸ್ಥೆ ಅಧ್ಯಕ್ಷ ಟಿ.ಎಚ್.ಬುಡೇನ್‌ಸಾಬ್ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ,ಸಾಮಾಜಿಕ ಕಾರ‌್ಯಕರ್ತ ವಾದಿರಾಜ್ ಮತ್ತಿತರ ಪ್ರಮುಖರು ಮುಖ್ಯಅತಿಥಿಗಳಾಗಿ ಆಗಮಿಸುವರು. ಆಸಕ್ತ ರಕ್ತದಾನಿಗಳು ದೂರವಾಣಿ ಸಂಖ್ಯೆ 9900981423ನ್ನು ಸಂಪರ್ಕಿಸಬಹುದೆಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net