26ರಂದು ಬೆಂಗಳೂರು ಚಲೋ

21Ram2
ರೈತರ ವಿವಿಧ ಬೇಡಿಕೆಗೆ ಒತ್ತಾಯಿಸಿ ಬೆಂಗಳೂರು ಚಲೋ ಪೂರ್ವಭಾವಿ ಸಭೆಯಲ್ಲಿ ಮುಖಂಡ ಸುರೇಶ ಪಾಟೀಲ ರೈತರ ಬೇಡಿಕೆಗಳ ಪಟ್ಟಿ ಪ್ರದರ್ಶಿಸಿದರು. ಸುರೇಶ ಪಾಟೀಲ, ಎಸ್.ಬಿ. ಸಿದ್ನಾಳ, ರಾಮಪ್ಪ ಮನಿಹಾಳ ಇತರರಿದ್ದರು.
Published on

ರಾಮದುರ್ಗ: ಕೃಷಿ ಪಂಪಸೆಟ್‌ಗಳಿಗೆ ಉಚಿತ್ ವಿದ್ಯುತ್ ಪೂರೈಕೆ ನಿಲ್ಲಿಸುವ ಮತ್ತು ವಿದ್ಯುತ್ ಇಲಾಖೆಯನ್ನು ಖಾಸಗೀಕರಣ ಮಾಡಲು ಹೊರಟಿರುವ ಸರ್ಕಾರದ ನೀತಿ ಖಂಡಿಸಿ, ಕಬ್ಬು ಬೆಳಗಾರರ ಸಂಘ ಹಾಗೂ ರೈತರ ಸಹಭಾಗಿತ್ವದಲ್ಲಿ ಸೆ. 26 ರಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಕಬ್ಬು ಬೆಳೆಗಾರರ ಸಂಘದ ಮುಖಂಡ ಸುರೇಶ ಪಾಟೀಲ ಹೇಳಿದರು.

ಪಟ್ಟಣದ ಸರ್ಕಿಟ್ ಹೌಸ್‌ನಲ್ಲಿ ಗುರುವಾರ ಏರ್ಪಡಿಸಿದ್ದ ಕಬ್ಬು ಬೆಳಗಾರರ ಸಂಘದ ಸಭೆಯಲ್ಲಿ ಮಾತನಾಡಿದ ಅವರು, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕು. ಡಾ.ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು. ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದುಕೊಳ್ಳುಬೇಕು ಎಂದರು.

ದೆಹಲಿ ರೈತ ಹೋರಾಟದಲ್ಲಿ ಮಡಿದ ರೈತ ಕುಟುಂಬಗಳಿಗೆ ಶೀಘ್ರ ಪರಿಹಾರ, ಅತಿವೃಷ್ಟಿ, ಅನಾವೃಷ್ಟಿಯಿಂದ ಹಾನಿಗೊಳಗಾದ ಬೆಳೆಗಳಿಗೆ ಸೂಕ್ತ ಪರಿಹಾರ ನೀಡುವುದು, ಕೃಷಿ ಉಪಕರಣ ಹಾಗೂ ಉತ್ಪನ್ನಗಳಿಗೆ ವಿಧಿಸಿದ ಜಿಎಸ್‌ಟಿ ರದ್ದುಗೊಳಿಸುವುದು, ಬೆಳೆ ವಿಮಾ ಯೋಜನೆಯ ಮಾನದಂಡ ಬದಲಾವಣೆ, ಪ್ರಸಕ್ತ ಸಾಲಿನ ಕೃಷಿ ಸಾಲ ವಸೂಲಾತಿ ನಿಲ್ಲಿಸುವುದು ಸೇರಿ ವಿವಿಧ ಬೇಡಿಕೆಗಳಿಗೆ ಸರ್ಕಾರವನ್ನು ಒತ್ತಾಯಿಸಲು ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಂಡಿದೆ. ಸರ್ಕಾರ ಎಚ್ಚೆತ್ತುಕೊಂಡು ರೈತರ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಕಬ್ಬು ಬೆಳಗಾರರ ಸಂಘದ ಮುಖಂಡ ಎಸ್.ಬಿ. ಸಿದ್ನಾಳ, ರಾಮಪ್ಪ ಮನಿಹಾಳ, ಶಾಸಪ್ಪ ನಾವಿ, ಫಕೀರಗೌಡ ಪಾಟೀಲ, ಫಕ್ರುಸಾಬ ಜಕಾತಿ, ಮಲ್ಲಪ್ಪ ಮನಿಹಾಳ, ಎಂ.ಎನ್.ಶಿರಸಂಗಿ, ನಾಗನಗೌಡ ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net