

ಗಂಡಸಿ : ಹೋಬಳಿಯ ಕುಡುಕುಂದಿ ಗ್ರಾಮದ ಬೆಟ್ಟದ ತಪ್ಪಲಿನಲ್ಲಿ ನೆಲೆಸಿರುವ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಆಗಸ್ಟ್ 26, 27 ರಂದು ವಿಜೃಂಭಣೆಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ನಡೆಯಲಿದೆ.
26ರಂದು ಸಂಜೆ ಗ್ರಾಮ ದೇವತೆಗಳಾದ ಶ್ರೀ ಕುಂಟುಮಾರಮ್ಮ, ಶ್ರೀದ್ಯಾವಮ್ಮ, ಶ್ರೀ ದಬ್ಬಪ್ಪ ಸ್ವಾಮಿ ಅವರನ್ನು ಹೂವಿನ ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಮದ್ದು ಗುಂಡಿನ ಸುರಿಮಳೆ, ವಿವಿಧ ಜಾನಪದ ಕಲಾತಂಡಗಳ ಕುಣಿತದೊಂದಿಗೆ ಕುಡುಕುಂದಿ ಗ್ರಾಮದಿಂದ ಶ್ರೀ ವೇಣುಗೋಪಾಲ ಸ್ವಾಮಿ ಅವರ ಮೂಲ ಸನ್ನಿಧಿ ಬೆಟ್ಟಕ್ಕೆ ಕರೆತರವಾಗುವುದು.
27 ರ ಬೆಳಗ್ಗೆ ಶ್ರೀ ವೇಣುಗೋಪಾಲ ಸ್ವಾಮಿ ಅವರಿಗೆ ಅಭಿಷೇಕ, ಅಷ್ಟೋತ್ತರ ಸಹಸ್ರನಾಮ ಪೂಜೆ, ಮಹಾಸಂಕಲ್ಪ, ಸಹಸ್ರನಾಮ ಪೂಜೆ, ಗಣಪತಿ ಪೂಜೆ, ಹೋಮ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿದೆ. 26 ಮತ್ತು 27 ಎರಡು ದಿನ ಶ್ರೀ ವೇಣುಗೋಪಾಲಸ್ವಾಮಿ ಅವರ ಸನ್ನಿಧಿಗೆ ಬರುವ ಭಕ್ತರಿಗೆ ಅನ್ನದಾಸೋಹ ಕಾರ್ಯಕ್ರಮ ಏರ್ಪಡಿಸಲಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ವೇಣುಗೋಪಾಲ ಸ್ವಾಮಿ ಅವರ ಆಶೀರ್ವಾದಕ್ಕೆ ಪಾತ್ರರಾಗಬೇಕಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕಮಿಟಿ ಪ್ರಕಟಣೆಯಲ್ಲಿ ಕೋರಿದೆ.