ಬಾಬೂಜಿ ತತ್ವ ಆದರ್ಶ ಎಲ್ಲರಿಗೂ ಮಾದರಿ

5 HBD 2
ಹುಮನಾಬಾದ್ ತಹಸಿಲ್ ಕಚೇರಿಯಲ್ಲಿ ಶನಿವಾರ ನಡೆದ ಡಾ.ಬಾಬು ಜಗಜೀವನರಾಮ್ ಜಯಂತ್ಯುತ್ಸವದಲ್ಲಿ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ತಹಸೀಲ್ದಾರ ಅಂಜುಮ್ ತಬಸ್ಸುಮ್, ತಾಪಂ ಇಒ ದೀಪಿಕಾ ನಾಯ್ಕರ ಇತರರಿದ್ದರು.
Published on

ಹುಮನಾಬಾದ್: ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಮ್ ಅವರ ತತ್ವ ಆದರ್ಶಗಳು ಇಂದಿಗೂ ನಮ್ಮೆಲ್ಲರಿಗೂ ಮಾದರಿಯಾಗಿವೆ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.

ಪಟ್ಟಣದ ತಹಸಿಲ್ ಕಚೇರಿಯಲ್ಲಿ ಹಾಗೂ ಕೆಇಬಿ ಕಚೇರಿ ಹತ್ತಿರವಿರುವ ಡಾ.ಬಾಬು ಜಗಜೀವನರಾಮ್ ವೃತ್ತದಲ್ಲಿ ನಡೆದ ಬಾಬೂಜಿ ಅವರ ೧೧೮ನೇ ಜಯಂತ್ಯುತ್ಸವದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ದೇಶಕ್ಕೆ ಬಾಬೂಜಿ ಅವರ ಕೊಡುಗೆಗಳನ್ನು ಸ್ಮರಿಸಿದ್ದರು. ಬಾಬೂಜಿ ಸೇರಿ ಮಹಾನ್ ನಾಯಕರ ಜಯಂತಿ ಕೇವಲ ಒಂದು, ಧರ್ಮ, ಜಾತಿಗೆ ಸಿಮೀತಗೊಳಿಸಬಾರದು ಎಂದರು.

ಬರುವ ವರ್ಷದಲ್ಲಿ ವೃತ್ತದಲ್ಲಿ ಬಾಬೂಜಿ ಅವರ ಮೂರ್ತಿ ಪ್ರತಿಷ್ಠಾಪನೆ ಮಾಡಲು ಪಕ್ಷಾತೀತವಾಗಿ ಸಮಿತಿಯವರು ಮುಂದಾಗಬೇಕು. ಈ ಕಾರ್ಯಕ್ಕೆ ನನಗೆ ಯಾವ ಕೆಲಸ ಒಪ್ಪಿಸಿದರು ಅದಕ್ಕೆ ಸಹಕರಿಸುವುದಾಗಿ ಭರವಸೆ ನೀಡಿದರು.

ತಹಸೀಲ್ದಾರ ಅಂಜುಮ್ ತಬಸ್ಸುಮ್, ತಾಪಂ ಇಒ ದೀಪಿಕಾ ನಾಯ್ಕರ, ಉತ್ಸಹ ಸಮಿತಿ ಅಧ್ಯಕ್ಷ ಅನಂತ ಮಾಳಗೆ , ಉಪಾಧ್ಯಕ್ಷ ಸಾಗರ ಮುಸ್ತ, ಮುಖಂಡರಾದ ರಾಜು ತಾಳಮಡಗಿ, ಪರಮೇಶ್ವರ ಕಾಳಮಂದರಗಿ, ಪಪ್ಪುರಾಜ ಚತುರೆ, ಮಹೇಶ ಕಟ್ಟಿಮನಿ, ಉಮೇಶ ಕಟ್ಟಿಮನಿ, ಪಕ್ಷದ ಮುಖಂಡರಾದ ವಿಶ್ವನಾಥ ಮಾಡಗುಳ, ಗಜೇಂದ್ರ ಕನಕ್ಕಟರಕ, ಮಲ್ಲಿಕಾರ್ಜುನ ಸೀಗಿ, ನಾರಾಯಣರಾವ ರಾಂಪುರೆ, ವಿನಾಯಕ ಮಂಕೋಜಿ, ನಾಗಭೂಷಣ ಸಂಗಮ, ಸುನೀಲ ಪತ್ರಿ, ಗೋಪಾಲಕೃಷ್ಣ ಮೊಹಾಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net