

ತುಮಕೂರು: ಜಿಲ್ಲೆಯಲ್ಲಿ ಭಾನುವಾರ 267 ಜನರಲ್ಲಿ ಕರೊನಾ ಸೋಂಕು ದೃಢವಾಗಿದೆ. ಈ ಪೈಕಿ 202ಜನರಿಗೆ ರೋಗದ ಯಾವುದೇ ಲಕ್ಷಣಗಳಿಲ್ಲ, ಇನ್ನುಳಿದ 65 ಜನರಿಗೆ ಮಾತ್ರ ರೋಗ ಲಕ್ಷಣಗಳು ಕಾಣಿಸಿವೆ. 174 ಜನರು ಗುಣಮುಖರಾಗಿ ಬಿಡುಗಡೆಯಾದರು.
138 ಪುರುಷರು, 129 ಮಹಿಳೆಯರಲ್ಲಿ ಸೋಂಕು ಕಾಣಿಸಿದೆ, ಮಧುಗಿರಿ, ಗುಬ್ಬಿ ಹಾಗೂ ಕುಣಿಗಲ್ ತಾಲೂಕಿನಲ್ಲಿ ತಲಾ ಒಬ್ಬರು ಗರ್ಭಿಣಿಯರಿಗೆ ಸೋಂಕು ದೃಢವಾಗಿದೆ, ಐದು ವರ್ಷದೊಳಗಿನ ಒಂದು ಮಗು ಹಾಗೂ 60 ವರ್ಷ ಮೇಲ್ಪಟ್ಟ 60 ಜನರಿಗೆ ವಕ್ಕರಿಸಿದೆ.
ಚಿಕ್ಕನಾಯಕನಹಳ್ಳಿ 4, ಗುಬ್ಬಿ 54, ಕೊರಟಗೆರೆ 6, ಕುಣಿಗಲ್ 19, ಮಧುಗಿರಿ 13, ಪಾವಗಡ 11, ಶಿರಾ 34, ತಿಪಟೂರು 29, ತುಮಕೂರು 63 ಹಾಗೂ ತುರುವೇಕೆರೆ ತಾಲೂಕಿನಲ್ಲಿ 34 ಜನರಿಗೆ ಕರೊನಾ ತಗುಲಿದ್ದು, ಇವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದವರನ್ನು ಗುರುತಿಸಿ ಪರೀಕ್ಷೆಗೆ ಒಳಪಡಿಸುವ ಕಾರ್ಯವನ್ನು ಮಾಡಲಾಗಿದೆ. ವೈರಸ್ ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಾವಗಡ ತಾಲೂಕು ರೆಡ್ಡಿ ಕಾಲನಿಯ 65 ವರ್ಷದ ವೃದ್ಧ ಹಾಗೂ ಕುಣಿಗಲ್ ತಾಲೂಕು ಕಿತ್ತಘಟ್ಟದ 55 ವರ್ಷದ ವ್ಯಕ್ತಿ ಕರೊನಾಗೆ ಬಲಿಯಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ ಈವರೆಗೆ 162 ಜನರು ಬಲಿಯಾದಂತಾಗಿದ್ದು 1533 ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಟ್ಟು 5775ಜನರಿಗೆ ಸೋಂಕು ತಗುಲಿದಂತಾಗಿದ್ದು, ಒಟ್ಟು 21 ಜನರುತೀವ್ರ ತುರ್ತು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದ ಬಹುತೇಕರು ರೋಗದ ಯಾವುದೇ ಲಕ್ಷಣಗಳಿಲ್ಲದೆ ನಿಗಾದಲ್ಲಿ ದ್ದಾರೆ. ಸಕ್ರಿಯ ಪ್ರಕರಣಗಳ ಸಂಪರ್ಕಿತರು ಎಂದು 5669 ಜನರನ್ನು ಗುರುತಿಸಲಾಗಿದ್ದು ಎಲ್ಲರಿಗೂ ಕರೊನಾ ಟೆಸ್ಟ್ ಮಾಡಿಸಲಾಗುತ್ತಿದೆ.
ಸೋಂಕಿತರ ಪ್ರಾಥಮಿಕ ಸಂಪರ್ಕದ 5669, ದ್ವಿತೀಯ ಸಂಪರ್ಕ ದಲ್ಲಿದ್ದ 9246 ಒಟ್ಟು 14915 ಜನರನ್ನು ಸಕ್ರಿಯ ಸಂಪರ್ಕಿತರು ಎಂದು ಗುರುತಿಸಲಾಗಿದೆ. ಈವೆರೆಗೆ 74346 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು 5775ಜನರಲ್ಲಿ ಮಾತ್ರ ಸೋಂಕು ಪತ್ತೆಯಾಗಿದೆ.