

ಇಂಡಿ: ಲೋಕ ಅದಾಲತ್ನಲ್ಲಿ ಕಾನೂನಿನ ಪ್ರಕಾರ ರಾಜಿ ಆಗಬಹುದಾದ 2658 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಕೋಟೆಪ್ಪ ಕಾಂಬಳೆ ತಿಳಿಸಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಮೆಗಾ ಲೋಕ ಅದಾಲತ್ ಕಾರ್ಯಕ್ರಮದ ನಂತರ ಮಾತನಾಡಿದ ಅವರು, ಬ್ಯಾಂಕಿನ ಸಾಲ ಪ್ರಕರಣಗಳು ಸೇರಿದಂತೆ 3.5 ಕೋಟಿ ರೂ. ವಸೂಲಾತಿಯಾಗಿದೆ. ಕ್ರಿಮಿನಲ್ ಪ್ರಕರಣಗಳು, ಕುಡಿದು ವಾಹನ ನಡೆಸಿದ ಪ್ರಕರಣ, ಸಾರ್ವಜನಿಕ ಸ್ಥಳದಲ್ಲಿ ಶಾಂತಿ ಭಂಗ ಉಂಟು ಮಾಡಿದ್ದು, ಅಪಘಾತ ಪ್ರಕರಣ, ಸಿವಿಲ್ ಪಾಲು, ವಾಟ್ನಿ ದಾವೆ, ವಾಹನ ಅಪಘಾತ ಪರಿಹಾರ ಮತ್ತಿತರ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದರು.
ಕಿರಿಯ ಶ್ರೇಣಿ ನ್ಯಾಯಾಧೀಶ ಸುನೀಲಕುಮಾರ ಎಂ.ಎಸ್, ಎಸ್.ಆರ್. ಬಿರಾದಾರ, ನ್ಯಾಯವಾದಿಗಳಾದ ಎಸ್.ಎಲ್.ನಿಂಬರಗಿಮಠ, ಸೋಮು ನಿಂಬರಗಿಮಠ, ಎಸ್.ಎಸ್.ಪಾಟೀಲ, ಸುನೀಲ ಕುಲಕರ್ಣಿ, ಬಿ.ಬಿ. ಬಿರಾದಾರ, ಬಿ.ಸಿ. ತಾಂಬೆ, ಎಸ್.ಜಿ. ಹತ್ತರಕಿ, ಎಸ್.ಎಸ್. ರೆಬಿನಾಳ, ಪ್ರವಿಣ ಕಾಂಬಳೆ, ವೈ.ಎಸ್. ಪೂಜಾರಿ, ಎ.ಜಿ. ಜೋಶಿ, ವಿ.ಎಸ್.ಹಂಜಗಿ, ವಿ.ಜಿ.ನಾಯಕ, ಸುನೀಲ ಪರಿಮಳ, ಪ್ರಕಾಶ ಗುಜಲಕರ ಮತ್ತಿತರಿದ್ದರು.