

ಧಾರವಾಡ: ದ್ವಿತೀಯ ಪಿಯುಸಿ ಪರೀಕ್ಷೆ ಮಾ. 1ರಿಂದ ಆರಂಭವಾಗಲಿದ್ದು, 22ರವರೆಗೆ ಜರುಗಲಿವೆ. ಪರೀಕ್ಷೆಗಾಗಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಅಗತ್ಯ ಸಿದ್ಧತೆ ಮಾಡಿಕೊಂಡಿದೆ.
ಜಿಲ್ಲೆಯಾದ್ಯಂತ 12,704 ವಿದ್ಯಾರ್ಥಿಗಳು, 13,707 ವಿದ್ಯಾರ್ಥಿನಿಯರು ಸೇರಿ 26,411 ಜನ ನೋಂದಾಯಿಸಿಕೊAಡಿದ್ದಾರೆ. ಕಲಾ ವಿಭಾಗದಲ್ಲಿ 6,679, ವಾಣಿಜ್ಯ ವಿಭಾಗದಲ್ಲಿ 6,915 ಹಾಗೂ ವಿಜ್ಞಾನ ವಿಭಾಗದಲ್ಲಿ 12,817 ವಿದ್ಯಾರ್ಥಿಗಳು ನೋಂದಾಯಿಸಿಕೊAಡಿದ್ದಾರೆ.
ಧಾರವಾಡ ಶಹರದಲ್ಲಿ 14, ಹುಬ್ಬಳ್ಳಿ ತಾಲೂಕು 20, ಕಲಘಟಗಿ 2, ಕುಂದಗೋಳ 4, ನವಲಗುಂದ 3 ಸೇರಿ ಜಿಲ್ಲೆಯಾದ್ಯಂತ 43 ಪರೀಕ್ಷಾ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ. ಜಿಲ್ಲಾ ಖಜಾನೆಯಲ್ಲಿ ಬಯೋಮೆಟ್ರಿಕ್ ಮೂಲಕ ಪ್ರಶ್ನೆಪತ್ರಿಕೆ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಸಿಸಿಟಿವಿ ಅಳವಡಿಕೆ ಮತ್ತು ಮೂಲ ಸೌಕರ್ಯ ಕಲ್ಪಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಕೃಷ್ಣಾ ನಾಯಕ ತಿಳಿಸಿದ್ದಾರೆ.