264 ಪೊಲೀಸರು ಹುತಾತ್ಮ

21 ckm 2 web
Published on

ಚಿಕ್ಕಮಗಳೂರು: ಎಲ್ಲಿಯವರೆಗೆ ಪ್ರತಿಯೊಬ್ಬರೂ ನೈತಿಕ ಮೌಲ್ಯಗಳ ಆಧಾರದಲ್ಲಿ ನಡೆದುಕೊಳ್ಳುವ ವ್ಯವಸ್ಥೆ ನಿರ್ವಣವಾಗುವುದಿಲ್ಲವೋ ಅಲ್ಲಿಯವರೆಗೂ ಸುಸ್ಥಿರ ಸಮಾಜದ ಸೃಷ್ಟಿ ಅಸಾಧ್ಯ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ರಾಮನಹಳ್ಳಿ ಜಿಲ್ಲಾ ಪೊಲೀಸ್ ಸಶಸ್ತ್ರ ಮೀಸಲು ಪಡೆಯ ಹುತಾತ್ಮ ಸ್ಮಾರಕ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೊಲೀಸ್ ಹುತಾತ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ನಾವು ಇಂದು ಸುರಕ್ಷಿತವಾಗಿದ್ದೇವೆ ಎಂದರೆ ತಮ್ಮ ಪ್ರಾಣ ಪಣಕ್ಕಿಟ್ಟು ದೇಶ ರಕ್ಷಣೆ ಮಾಡುತ್ತಿರುವ ಯೋಧರು ಮತ್ತು ನಾಗರಿಕ ಸಮಾಜದೊಳಗೆ ನಮ್ಮನ್ನು ರಕ್ಷಣೆ ಮಾಡುತ್ತಿರುವ ಪೊಲೀಸರಿಂದ. ಈ ಬಾರಿ ಕರ್ತರ್ವವ್ಯದಲ್ಲಿರುವಾಗಲೇ ದೇಶದಾದ್ಯಂತ 264 ಪೊಲೀಸರು ಹುತಾತ್ಮರಾಗಿದ್ದಾರೆ ಎಂದರು.

ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಾತನಾಡಿ, 1959ರ ಅ.21ರಂದು ಚೀನಾ ದಾಳಿಯಿಂದ 10 ಪೊಲೀಸರು ಮರಣ ಹೊಂದುತ್ತಾರೆ. ಅದಾದ ಒಂದು ತಿಂಗಳವರೆಗೂ ನಮ್ಮ ದೇಶಕ್ಕೆ ಹುತಾತ್ಮ ದೇಹ ನೀಡಿರುವುದಿಲ್ಲ. ನ.28 ರಂದು ನೀಡುತ್ತಾರೆ ಆ ಸ್ಮರಣಾರ್ಥವಾಗಿ ಪೊಲೀಸ್ ಹುತಾತ್ಮರ ದಿನಾಚರಣೆ ಆಚರಿಸಲಾಗುತ್ತದೆ. ಪೊಲೀಸ್ ಅಂದರೆ ಧೈರ್ಯ, ತ್ಯಾಗ, ಸಮರ್ಪಣೆ. ನಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ಪ್ರಾಮಾಣಿಕತೆಯಿಂದ ಮಾಡಿದರೆ ಸಮಾಜದಿಂದ ಅಷ್ಟೆ ಗೌರವ ಸಲ್ಲುತ್ತದೆ. ತಮ್ಮ ಕೆಲಸವನ್ನು ಪ್ರಮಾಣಿಕವಾಗಿ ಮಾಡಿ ಉಳಿದಿರುವುದನ್ನು ಭಗವಂತನ ಬಿಟ್ಟವರಿಗೆ ಕಂಡಿತಾ ಜಯ ಸಿಗುತ್ತದೆ ಎಂದರು.

ಆರಂಭದಲ್ಲಿ ಹುತಾತ್ಮರ ಸ್ಮಾರಕಕ್ಕೆ ಗಣ್ಯರು ರೀತ್ ಅರ್ಪಿಸಿ ಗೌರವ ಸಮರ್ಪಿಸಿದರು. ಹುತಾತ್ಮರ ಗೌರವರ್ಥವಾಗಿ ಗಾಳಿಯಲ್ಲಿ ಮೂರು ಸುತ್ತು ಕುಶಾಲತೋಪು ಹಾರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net