

ಬೆಳಗಾವಿ: ಜೈನ ಧರ್ಮದ 24ನೇ ತೀರ್ಥಂಕ ಭಗವಾನ ಮಹಾವೀರರ 2624ನೇ ಜನ್ಮ ಕಲ್ಯಾಣಕ ಮಹೋತ್ಸವ ಏ.10ರಂದು ಆಚರಿಸಲಾಗುತ್ತಿದೆ ಎಂದು ಉತ್ಸವ ಸಮಿತಿಯ ಗೌರವ ಕಾರ್ಯದರ್ಶಿ ರಾಜೇಂದ್ರ ಜೈನ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.3 ರಂದು ಭರತೇಶ ಶಿಕ್ಷಣ ಸಂಸ್ಥೆ ಹಾಗೂ ಏ.7ರಂದು ಗೋಮಟೇಶ ವಿದ್ಯಾಪಿಠ ಹಿಂದವಾಡಿಯಲ್ಲಿ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಏ.5 ರಂದು ಸಾಂಸತಿಕ ಕಾರ್ಯಕ್ರಮ ನಡೆಯಲಿವೆ. ಈ ಕಾರ್ಯಕ್ರಮದಲ್ಲಿ ಭಜನಾ ಸ್ಪರ್ಧೆ, ಟ್ಯಾಲೆಂಟ್ ಶೋ, ಡೈನಾಮಿಕ್ ಡ್ಯೂ, ಹಬ್ಬಗಳ ಆಚರಣೆ , ಜೈನ ಅಡುಗೆ ಸ್ಪರ್ಧೆ ಆಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಏ. 6ರಂದು ನಗರದ ಸಿಪಿಎಡ್ ಮೈದಾನದಲ್ಲಿ ಬೃಹತ್ ಬೈಕ್ ರ್ಯಾಲಿಗೆ ಚಾಲನೆ ಸಿಗಲಿದೆ. ಈ ರ್ಯಾಲಿಯಲ್ಲಿ ಸುಮಾರು 500 ಜನರು ಭಾಗವಹಿಸಲಿದ್ದಾರೆ. ಬಳಿಕ ಮಹಾವೀರ ಭವನದಲ್ಲಿ ರಂಗೋಲಿ ಸ್ಪರ್ಧೆ, ಆಗಮ ಶಾಸಣಉ ಅಲಂಕಾರ ಸ್ಫರ್ಧೆ, ನೃತ್ಯ ಸ್ಪರ್ಧೆ ನಡೆಯಲಿವೆ. ಏ.7 ರಂದು ಫ್ಯಾನ್ಸಿ ಡ್ರೆಸ್ ಮತ್ತು ನಾಟಕ ಸ್ಪರ್ಧೆ ನಡೆಯಲಿವೆ. ಏ.8 ರಂದು ಜಿನಯ ಜ್ವಾಲಾಮಾಲಿನಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಬಿಸಿಲು ಹೆಚ್ಚಾಗುತ್ತಿರುವ ಕಾರಣ ಪ್ರಮುಖ ಮೆರವಣಿಗೆಯ ಮಾರ್ಗ ಬದಲಾಯಿಸಲಾಗಿದೆ. ಈ ವರ್ಷ ಏ. 10 ರಂದು ಉತ್ಸವದ ಪ್ರಮುಖ ಮೆರವಣಿಗೆ ನಗರದ ಟಿಳಕಚೌಕ್ದಿಂದ ಪ್ರಾರಂಭಗೊಂಡು, ಶೇರಿ ಗಲ್ಲಿ, ಶನಿ ಮಂದಿರ ರಸ್ತೆ, ಎಸ್.ಪಿ.ಎಂ.ರೋಡ್, ಕೋರೆ ಗಲ್ಲಿ ಶಹಾಪುರ, ಬಸವೇಶ್ವರ ಸರ್ಕಲ್ ಮೂಲಕ ಮಹಾವೀರ ಭವನದಲ್ಲಿ ಮುಕ್ತಾಯಗೊಳ್ಳಲಿದೆ. ಈ ಮೆರವಣಿಗೆಯಲ್ಲಿ ಸುಮಾರು 40ಕ್ಕೂ ಹೆಚ್ಚು ಸ್ತಬಟಛಿ ಚಿತ್ರಗಳ ಶೋಭಾರಥ ಭಾಗವಹಿಸಲಿವೆ ಎಂದರು. ವಕೀಲ ರವಿರಾಜ ಪಾಟೀಲ, ಜಿತೋ ಪ್ರಧಾನ ಕಾರ್ಯದರ್ಶಿ ಅಭಯ ಆದಿಮನಿ , ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ, ಉತ್ಸವ ಸಮಿತಿಯ ಸಹ ಕಾರ್ಯದರ್ಶಿ ಹೀರಾಚಂದ ಕಲಮನಿ, ರಾಜು ಖೋಡಾ, ಸುರೇಖಾ ಗೌರಗೊಂಡಾ ಅರುಣಾ ಶಹಾ ಇತರರಿದ್ದರು.