26 ಸಾವಿರ ಮನೆಗಳಿಗೆ ನೀರಿನ ಸಂಪರ್ಕ

15 gkp 02
Published on

ಗೋಣಿಕೊಪ್ಪ: ಪೊನ್ನಂಪೇಟೆ ಮತ್ತು ವಿರಾಜಪೇಟೆ ತಾಲೂಕಿನಲ್ಲಿ 26 ಸಾವಿರ ಮನೆಗಳಿಗೆ ಜಲ್‌ಜೀವನ್ ಕುಡಿಯುವ ನೀರು ಯೋಜನೆ ಗುರಿ ಸಾಧಿಸಲಾಗಿದೆ ಎಂದು ಶಾಸಕ ಕೆ. ಜಿ. ಬೋಪಯ್ಯ ಹೇಳಿದರು.


ಇತ್ತೀಚೆಗೆ ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಣಂಗೇರಿ ಕಾಲನಿಯಲ್ಲಿ 27 ಲಕ್ಷ ರೂ. ಅನುದಾನದಲ್ಲಿ ಜಲ್‌ಜೀವನ್ ಯೋಜನೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಕೇಂದ್ರ ಸರ್ಕಾರ ಜಲ್‌ಜೀವನ್ ಯೋಜನೆ ಅನುಷ್ಠಾನದಲ್ಲಿ 2024ಕ್ಕೆ ತಾಲೂಕುಗಳಿಗೆ ನೀಡಿದ್ದ ಗುರಿ ಸಾಧಿಸಲಾಗಿದೆ. 84 ಕೋಟಿ ರೂ. ಅನುದಾನದಲ್ಲಿ 26 ಸಾವಿರ ಮನೆಗಳಿಗೆ ಕುಡಿಯ ನೀರು ಪೂರೈಕೆಗೆ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ ಎಂದರು.


ಇತ್ತೀಚಿನ ದಿನಗಳಲ್ಲಿ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಇಳಿಕೆಯಾಗುತ್ತಿದ್ದು, ಕೊಂಗಣ ಹೊಳೆಯಿಂದ ದಕ್ಷಿಣ ಕೊಡಗಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಅನುಷ್ಠಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಿಂದ ಸುಮಾರು 20 ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳ ಕುಡಿಯುವ ನೀರಿನ ಸಮಸ್ಯೆ ನೀಗಿಸಬಹುದು ಎಂದು ಮಾಹಿತಿ ನೀಡಿದರು.

ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಸ್ಥಳ ದಾನ ಮಾಡಿರುವ ದೊರೆಪ್ಪ, ಚಾಮರಾಜ, ಹುದಿಕೇರಿ ಗ್ರಾಪಂ ಅಧ್ಯಕ್ಷ ವಾಸು ಬಿದ್ದಪ್ಪ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿನೋದ್ ಕುಮಾರ್, ಜಲ್‌ಜೀವನ್ ಯೋಜನೆ ಅಧಿಕಾರಿ ಯೋಗೇಶ್ ಗೌಡ, ಬಿಜೆಪಿ ಮಂಡಲ ಅಧ್ಯಕ್ಷ ನೆಲ್ಲೀರ ಚಲನ್‌ಕುಮಾರ್, ಕಾರ್ಯದರ್ಶಿ ಅಜ್ಜಿಕುಟ್ಟಿರ ಪ್ರವೀಣ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net