26 ರಿಂದ 28 ವರೆಗೆ ಭಾರಿ ; ಪ್ರವಾಹ ಸಾಧ್ಯತೆ ; ಹವಾಮಾನ ತಜ್ಞರ ಮುನ್ಸೂಚನೆ

IMG-20230724-WA0087
Published on

ಪ್ರವಾಹ ಎಚ್ಚರಿಕೆ
ಕಲಬುರಗಿ : ನೈರುತ್ಯ ಮುಂಗಾರು ರಾಜ್ಯದೆಲ್ಲಡೆ ಚುರುಕುಗೊಂಡಿದೆ. ಇನ್ನೂ ಬಂಗಾಳ ಕೊಲ್ಲಿಯ ಮಾರುತುಗಳು ಇನ್ನಷ್ಟು ತೀವ್ರಗೊಳ್ಳುವುದರಿಂದ ಜು.೨26ರಿಂದ 28 ವರೆಗೆ ಕಲಬುಗಿ, ಬೀದರ್, ಯಾದಗಿರಿ ಮತ್ತು ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಭಾರಿ ಬಿರುಸಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಜ್ಞರು ಮುನ್ಸೂಚನೆ ನೀಡಿದ್ದಾರೆ.

ನಿರೀಕ್ಷೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಲಿದೆ. ಹೀಗಾಗಿ ಎಲ್ಲ ಜಲಾಶಯಗಳಿಗೆ ಹೆಚ್ಚಿನ ಹರಿವು ಬರಲಿದೆ. ಹೀಗಾಗಿ ಕೆಲವು ಕಡೆಗಳಲ್ಲಿ ಪ್ರವಾಹ ಸ್ಥಿತಿ ಉಂಟಾದರೂ ಆಗಬಹುದು ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಅದಕ್ಕೆ ಪೂರಕವಾಗಿರುವ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಡಳಿತಕ್ಕೂ ಸಲಹೆ ನೀಡಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಆಗಿರಲು ಸೂಚನೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net