

ಚಿತ್ರದುರ್ಗ: ನಗರದ ಗಮಕ ಕಲಾಭಿಮಾನಿಗಳ ಸಂಘ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಮೇ 26 ರಂದು ಗಮಕ ವಾಚನ-ವ್ಯಾಖ್ಯಾನ ಕಾರ್ಯಕ್ರಮ ಹಮ್ಮಿಕೊಂಡಿದೆ. ಶ್ರೀ ಜಗನ್ನಾಥದಾಸರ ಹರಿಕಥಾಮೃತ ಸಾರ ಕಾವ್ಯಭಾಗದ ವಾಚನವನ್ನು ಚಿತ್ರದುರ್ಗದ ಗಮಕಿ ವಾಣಿಪಾಂಡುರಂಗಿ ನಡೆಸಿಕೊಡಲಿದ್ದಾರೆ. ಗಮಕಿ ಪದ್ಮಾ ಭೀಮರಾವ್ ವ್ಯಾಖ್ಯಾನ ಮಾಡಲಿದ್ದಾರೆ. ಶ್ರೀಮಠದ ವ್ಯವಸ್ಥಾಪಕ ಪ್ರಾಣೇಶಾಚಾರ್‌ಕೊಪ್ಪರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.